ಇಳಕಲ್: ’ಜಗತ್ತು ಕಾಣಲು ದೃಷ್ಟಿ ಇರಬೇಕು. ವಯಸ್ಸಿನ ಕಾರಣಕ್ಕಾಗಿ ದೃಷ್ಟಿ ಮಂದವಾಗಿ ಕಷ್ಟಪಡುತ್ತಿದ್ದ 100 ಹಿರಿಯರನ್ನು ಗುರುತಿಸಿ, ಅವರಿಗೆ ಉಚಿತವಾಗಿ ನೇತ್ರಚಿಕಿತ್ಸೆ ನೆರವೇರಿಸಿದ ಇಲ್ಲಿಯ ಸುಭಾಸ ಕಾಖಂಡಕಿ ಕಣ್ಣನ ಆಸ್ಪತ್ರೆಯ ವೈದ್ಯ ಡಾ.ಸುಶೀಲ್ ಕಾಖಂಡಕಿ ಅವರು ಅಭಿನಂದನಾರ್ಹರುʼ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಅವರು ಶುಕ್ರವಾರದಂದು ಲಯನ್ಸ್ ಕ್ಲಬ್, ಡಾ.ಸುಭಾಶ ಕಾಖಂಡಕಿ ಕಣ್ಣಿನ ಆಸ್ಪತ್ರೆ ಹಾಗೂ ರಾಘವೇಂದ್ರ ನೇತ್ರ ಸೇವಾ ಕೇಂದ್ರದ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಕಾಟವಾ, ಮುಖ್ಯ ಅತಿಥಿಯಾಗಿ ಡಾ.ಸುಶೀಲ್ ಕಾಖಂಡಕಿ, ಸುದೀಪ್ತಿ ಕಾಖಂಡಿಕಿ, ರಾಜು ಬೋರಾ, ವೆಂಕಟೇಶ ಸಾಕಾ, ಶಾಂತಕುಮಾರ ಸುರಪುರ, ಡಾ.ಸಂತೋಷ ಪೂಜಾರ, ಪ್ರಮೋದ ಹಂಚಾಟೆ, ಕಾಶಿಮ್ ಕಂದಗಲ್ ಡಾ.ಮಹಾಂತೇಶ ಅಕ್ಕಿ, ಏಕನಾಥ ರಾಜೊಳ್ಳಿ, ಲಾಲಭಾಷಾ ಶಿವನಗುತ್ತಿ, ರವಿಕುಮಾರ್ ಅಂಗಡಿ, ಪ್ರಕಾಶ್ ಕರಡಿ, ಮುರುಗೇಶ ಪಾಟೀಲ, ಮಹಾವೀರ ಸುರಾನ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.