ADVERTISEMENT

ರಬಕವಿ ಬನಹಟ್ಟಿ ನಗರಸಭೆ; ಪೌರಕಾರ್ಮಿಕರ ಕೊರತೆ: ಘನತ್ಯಾಜ್ಯ ವಿಲೇವಾರಿ ಸವಾಲು

ವಿಶ್ವಜ ಕಾಡದೇವರ
Published 2 ಜೂನ್ 2024, 4:34 IST
Last Updated 2 ಜೂನ್ 2024, 4:34 IST
ಬನಹಟ್ಟಿಯ ಸಿದ್ಧರಾಮೇಶ್ವರ ದೇವಸ್ಥಾನದ ಬಳಿ ಕಸ ಸಂಗ್ರಹಗೊಂಡಿದೆ
ಬನಹಟ್ಟಿಯ ಸಿದ್ಧರಾಮೇಶ್ವರ ದೇವಸ್ಥಾನದ ಬಳಿ ಕಸ ಸಂಗ್ರಹಗೊಂಡಿದೆ   

ರಬಕವಿ ಬನಹಟ್ಟಿ: ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆಯಿಂದಾಗಿ ನಗರದಲ್ಲಿ ಕಸ ವಿಲೇವಾರಿ ಮತ್ತು ಕಸ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.

ನಗರದ ಬಹಳಷ್ಟು ಕಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಸಂಗ್ರಹಣೆಯಾದರೂ ಸರಿಯಾದ ರೀತಿಯಲ್ಲಿ ವಿಲೇವಾರಿಯಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರಿಯಾಗಿ ಕಸ ವಿಲೇವಾರಿಯಾಗದೆ ಇರುವುದರಿಂದ ಚರಂಡಿಗಳಲ್ಲೂ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಣೆಗೊಳ‍್ಳುತ್ತಿದೆ.

ನಗರಸಭೆಯ ವ್ಯಾಪ್ತಿಯಲ್ಲಿ ರಬಕವಿ, ಬನಹಟ್ಟಿ, ರಾಮಪುರ ಮತ್ತು ಹೊಸೂರ ಊರುಗಳು ಬರುತ್ತವೆ. ನಗರಸಭೆ ವ್ಯಾಪ್ತಿ ವಿಶಾಲವಾಗಿದ್ದು, ನಾಲ್ಕು ಊರುಗಳಿಗೆ ಒಟ್ಟು 124 ಜನ ಪೌರ ಕಾರ್ಮಿಕರ ಅಗತ್ಯವಿದೆ. ಸದ್ಯ 52 ಪೌರ ಕಾರ್ಮಿಕರು ಮಾತ್ರ ಇದ್ದಾರೆ. 16 ಪೌರ ಕಾರ್ಮಿಕರು ಬೇರೆ ಕಡೆಗೆ ಖಾಯಂ ಆಗಿ ನಿಯೋಜನೆಗೊಂಡಿದ್ದರಿಂದ ಕಸ ನಿರ್ವಹಣೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ADVERTISEMENT

ನಗರದ ಸಿದ್ಧರಾಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರು ಕಸ ಹಾಕುತ್ತಾರೆ. ಈ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಮತ್ತು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಸ್ವಚ್ಛ ವಾತಾವರಣ ಅಸಹನೀಯವಾಗಿದೆ. ಮುಗತಿ ಗಲ್ಲಿಗೆ ಹೋಗುವ ತಿರುವಿನ ಬಳಿಯೂ ಜನರು ಕಸ ಹಾಕುತ್ತಿದ್ದಾರೆ. ಚರಂಡಿ ಬದಿಗೆ ಕಸ ಹಾಕುತ್ತಿರುವುದರಿಂದ, ಚರಂಡಿ ನೀರು ಮುಂದೆ ಸಾಗದೆ, ಕಟ್ಟಿಕೊಳ್ಳುತ್ತಿದೆ. ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಅನಂತಮತಿ ಎಂಡೊಳ್ಳಿ ತಿಳಿಸಿದರು.

ರಬಕವಿ ಬನಹಟ್ಟಿ ನಗರಸಭೆಗೆ ಹೆಚ್ಚಿನ ಪೌರ ಕಾರ್ಮಿಕರನ್ನು ನೀಡಬೇಕು ಎಂದು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸದ್ಯ ಇರುವ ಪೌರಕಾರ್ಮಿಕರನ್ನು ಬಳಸಿಕೊಂಡು ಕಸ ನಿರ್ಹವಣೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದು ನಗರಸಭೆ ಅಧಿಕಾರಿಗಳ ಮಾತು.

ಕಸ ನಿರ್ವಹಣೆಗೆ 20 ವಾಹನಗಳನ್ನು ಬಳಸಾಗುತ್ತಿದೆ. ಸಾರ್ವಜನಿಕರು ಕಸವನ್ನು ರಸ್ತೆ ಚರಂಡಿಗೆ ಹಾಕದೆ ಈ ವಾಹನಗಳಿಗೆ ನೀಡಬೇಕು
– ಜಗದೀಶ ಈಟಿ, ನಗರಸಭೆ ಪೌರಾಯುಕ್ತ
ಬನಹಟ್ಟಿಯ ಮುಗತಿ ಗಲ್ಲಿಗೆ ಹೋಗುವ ರಸ್ತೆಯಲ್ಲಿ ಕಸ ಬಿಸಾಡಿರುವುದು
ಬನಹಟ್ಟಿಯ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.