ತೇರದಾಳ: ಪ್ರತಿ ವರ್ಷ ಶ್ರಾವಣ ಮಾಸದ ಮೂರನೇ ಸೋಮವಾರ ಜರುಗುವ ತಾಲ್ಲೂಕಿನ ಗೋಲಬಾವಿ ಬಸವೇಶ್ವರ ಜಾತ್ರೆ ಅಂಗವಾಗಿ ಅದ್ದೂರಿ ರಥೋತ್ಸವ ಜರುಗಿತು.
ಜಾತ್ರೆ ಅಂಗವಾಗಿ ಪ್ರಾತಃಕಾಲ ದೇವಸ್ಥಾನದಲ್ಲಿನ ನಂದಿ ವಿಗ್ರಹಕ್ಕೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕಗಳು ದೇವಸ್ಥಾನದ ಅರ್ಚಕ ಚನ್ನಬಸಯ್ಯ ಮಠದ ನೇತೃತ್ವದಲ್ಲಿ ಜರುಗಿದವು. ಸಂಜೆ ಜರುಗಿದ ರಥೋತ್ಸವಕ್ಕೆ ಬಬಲಾದಿಯ ಅಪ್ಪಯ್ಯ ಹಿರೇಮಠ ಶ್ರೀಗಳು ಪೂಜೆ ಸಲ್ಲಿಸಿ, ಚಾಲನೆ ನೀಡಿದರು.
ಅಲಂಕೃತ ನಂದಿಕೋಲು ಉತ್ಸವ, ಕಲಾವಿದರ ಕೈಪೆಟ್ಟು ವಾದನ, ಶಹನಾಯಿ ವಾದನಗಳು ಸಾಗುವ ರಥೋತ್ಸವಕ್ಕೆ ಕಳೆ ಕಟ್ಟಿದವು. ಹರಕೆ ಕಟ್ಟಿಕೊಂಡ ಭಕ್ತರು ರಥಕ್ಕೆ ಉತ್ತತ್ತಿ, ಬೆಂಡು, ಬಿಸ್ಕತ್ತು ಹಾಗೂ ಬತ್ತಾಸುಗಳನ್ನು ಎಸೆದು ಭಕ್ತಿಯಿಂದ ಸಮರ್ಪಿಸಿದರು.
ಶಾಸಕ ಸಿದ್ದು ಸವದಿ, ರಾಜೇಂದ್ರಕುಮಾರ ಗುಡಗುಂಟಿಮಠ ಸೇರಿದಂತೆ ಗೋಲಬಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.