ADVERTISEMENT

ಭಯ ಬೇಡ, ಭಕ್ತಿ, ನಂಬಿಕೆ ಇರಲಿ: ನಿಜಗುಣಪ್ರಭು ಶ್ರೀ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 16:00 IST
Last Updated 17 ನವೆಂಬರ್ 2024, 16:00 IST
ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು
ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು   

ಗುಳೇದಗುಡ್ಡ: ‘ಧರ್ಮವು ದೇವರು ಮತ್ತು ಪ್ರಕೃತಿಯ ಮಧ್ಯದಲ್ಲಿ ಬರುವ ಸತ್ಯದ ಸತ್ವವಾಗಿದೆ’ ಎಂದು ನಿಜಗುಣಪ್ರಭು ತೋಂಟದಾರ್ಯ ಶ್ರೀ ಹೇಳಿದರು.

ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಅಂಗವಾಗಿ ಏರ್ಪಡಿಸಿರುವ ಮಾಸಿಕ ಪ್ರವಚನದ ಮೂರನೇ ದಿನವಾದ ಭಾನುವಾರ ಪ್ರವಚನ ನೀಡಿದ ಅವರು, ಮನುಷ್ಯನಿಗೆ ದೇವರ ಬಗ್ಗೆ ಭಯವಿರಬಾರದು. ಭಕ್ತಿ, ನಂಬಿಕೆ ಇರಬೇಕು ಎಂದರು.

ಧರ್ಮ ಮತ್ತು ದೇವರು ಪ್ರಸ್ತುತ ಜನರ ಜೀವನದಲ್ಲಿ ಗೊಂದಲ ಮೂಡುವಂತೆ ಮಾಡಿವೆ. ಹಾಗಾದರೆ ಧರ್ಮ ಎಂದರೆ ಯಾವುದು? ಧರ್ಮ ಎನ್ನುವುದು ಜನಾಂಗ ಹುಟ್ಟಿದ ಮೇಲೆ ಆರಂಭವಾಯಿತು. ಬುದ್ಧನಿಂದ ಭೌದ್ಧಧರ್ಮ, ವೃಷಭನಿಂದ ಜೈನ ಧರ್ಮ, ಮಾಧ್ವರಿಂದ ಧ್ವೈತ, ರಾಮಾನುಜರಿಂದ ವಿಶಿಷ್ಟಾಧ್ವೈತ ಧರ್ಮ ಸ್ಥಾಪಿಸುವ ಮೂಲಕ ತಮ್ಮದೇ ಆಲೋಚನೆಗಳನ್ನು ಹೇಳಿದ್ದಾರೆ.

ADVERTISEMENT

ಜಗತ್ತಿನಲ್ಲಿ ಮನುಷ್ಯರಿಂದ ಮನುಷ್ಯರಿಗೆ ಧರ್ಮ ಬೋಧನೆಯಾಗಿದೆ, ದೇವರು ಪ್ರಕೃತಿ ಸೃಷ್ಟಿಸಿ ದೇವರನ್ನು ಅದರಲ್ಲಿ ಇಟ್ಟಿದ್ದಾನೆ. ಮಹಾತ್ಮರ ಅನುಭಾವ, ವಿಚಾರಧಾರೆಯನ್ನು ಧರ್ಮ ಎನ್ನುವರು ಎಂದರು. 

ದೇವನೊಬ್ಬನೇ ಸನಾತನ, ಸೃಷ್ಟಿಯ ಮೂಲ ಪರಮಾತ್ಮನಾಗಿದ್ದಾನೆ. ದೇವರು ಸತ್ಯವಾಗಿದ್ದಾನೆ. ವಿಜ್ಞಾನ ಮತ್ತು ಪ್ರಕೃತಿ ಸಮ್ಮತವಾದ್ದದ್ದೇ ಧರ್ಮವಾಗಿದೆ. ಭೂಮಿ, ಗಾಳಿ, ನೀರು,ಆತ್ಮ, ಪರಮಾತ್ಮನು ಸತ್ಯವಾಗಿದ್ದಾನೆ. ಎಲ್ಲರಿಗೂ ಅವು ಒಂದೇ ರೀತಿಯಾಗಿವೆ ಎಂದು ಹೇಳಿದರು.

ಮಹಾತ್ಮರು ಎಷ್ಟೇ ಉತ್ತಮವಾದದ್ದನ್ನು ಹೇಳಲಿ. ಆದರೆ, ಎಷ್ಟು ಮೌಲ್ಯಯುತವಾಗಿ ಮನುಷ್ಯ ಬದುಕುತ್ತಾನೆ ಎನ್ನುವುದು ಗೊತ್ತಿರಬೇಕು. ಮನುಷ್ಯನ ಹೃದಯ ಮತ್ತು ಮನಸ್ಸಿನ ಮೇಲೆ ಧರ್ಮ ನಿಲ್ಲಬೇಕು. ಜಾತಿಭೇದ ಮಾಡದೇ ನಾವೆಲ್ಲರೂ ಒಂದೇ ಎನ್ನುವುದೇ ಧರ್ಮವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.