ADVERTISEMENT

ತನು,ಮನ ಶುದ್ಧವಾಗಿರಲಿ

ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 16:16 IST
Last Updated 23 ನವೆಂಬರ್ 2024, 16:16 IST
ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು
ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು   

ಗುಳೇದಗುಡ್ಡ: ‘ಮನಸ್ಸು ಸಂಸ್ಕೃತಿ, ಸಂಸ್ಕಾರ ಹೊಂದಬೇಕು. ತನು, ಮನ, ಆತ್ಮ ಸತ್ಯಶುದ್ಧವಾಗಿರಬೇಕು’ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆ  ಅಂಗವಾಗಿ ಏರ್ಪಡಿಸಿರುವ ಮಾಸಿಕ ಪ್ರವಚನದ ಒಂಬತ್ತನೇ ದಿನವಾದ ಶನಿವಾರ ಪ್ರವಚನ ನೀಡಿದರು.

‘ಜಗತ್ತಿನಲ್ಲಿ ಪರಮಾತ್ಮನನ್ನು ಬಿಟ್ಟರೆ ಯಾರೂ ಪರಿಪೂರ್ಣರಲ್ಲ. ನಾವು ಜಗತ್ತಿನಲ್ಲಿ ಧರ್ಮವನ್ನು ಅರಿಯಬೇಕು. ಬದುಕು ಕಟ್ಟಿಕೊಳ್ಳಲು ತಂದೆ, ತಾಯಿ ದಾರಿಯಾಗುತ್ತಾರೆ. ಅಕ್ಕ ಮಹಾದೇವಿಯ ವಚನಗಳ ಸಾರದಂತೆ ನಾವು ಬದುಕಬೇಕು’ ಎಂದರು.

ADVERTISEMENT

‘ಮನಸ್ಸು ಚೆನ್ನಾಗಿಟ್ಟುಕೊಂಡು, ಬದುಕಿಗೆ ಬೇಕಾಗುವಷ್ಟು ಸಂಪತ್ತನ್ನು ಸಂಪಾದಿಸಿದಾಗ ಮಾತ್ರ ಆರಾಮವಾಗಿರುತ್ತೇವೆ. ಮನುಷ್ಯನಿಗೆ ಆತ್ಮಬಲ ಮುಖ್ಯ. ಇಷ್ಟಲಿಂಗ ಪೂಜೆಯಿಂದ ಬದುಕು ಗಟ್ಟಿಯಾಗುತ್ತದೆ’ ಎಂದು ಹೇಳಿದರು.

‘ಲಿಂಗವನ್ನು ಎಲ್ಲರೂ ಧರಿಸಬೇಕು. ಆಗ ಚಟದಿಂದ ಮುಕ್ತವಾಗಿ ಬದುಕಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.