ಕುಳಗೇರಿ ಕ್ರಾಸ್: ‘ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣ ಮಾಡುವಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದು’ ಎಂದು ನರಸಾಪೂರ ಹಿರೇಮಠದ ಮರುಳಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಗ್ರಾಮದ ಶ್ರೀಮತಿ ಜಿ.ಜಿ. ಹಕ್ಕಾಪಕ್ಕಿ ಪ್ರೌಢಶಾಲೆಯಲ್ಲಿ ಭಾನುವಾರ 2003-2004ನೇ ಸಾಲಿನ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರಪುಲಿಕೇಶಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಮೇಟಿ ಮಾತನಾಡಿ, ‘ಕಲಿಸಿದ ಗುರುವಿಗಿಂತ ಉನ್ನತ ಮಟ್ಟದಲ್ಲಿ ಶಿಷ್ಯರು ಬೆಳೆಯಬೇಕು ಎಂಬುದು ಗುರುಗಳ ಆಸೆಯಾಗಿರುತ್ತದೆ’ ಎಂದರು.
ಸ್ಥಳಿಯ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ವೀರುಪಾಕ್ಷ ಮಿಟ್ಲಕೋಡ ಮಾತನಾಡಿದರು.
ಸೇವೆಯಿಂದ ನಿವೃತ್ತಿ ಹೊಂದಿದ ಕನ್ನಡ ವಿಷಯ ಶಿಕ್ಷಕ ಎಸ್.ಎಸ್. ಹುಲ್ಲಮ್ಮನವರ, ಹಿಂದಿ ವಿಷಯ ಸಹ ಶಿಕ್ಷಕಿ ಎಚ್.ಎಸ್. ಬಾಗವಾನ, ಗಣಿತ ವಿಷಯ ಸಹಶಿಕ್ಷಕ ಆರ್.ಎಚ್. ಕಂಠಿ, ಶಿಕ್ಷಕಿ ಎಸ್.ಎಂ. ಅಂಗಡಿ, ಕೆ.ವೈ. ಪಾಟೀಲ, ಕೆ.ಎಲ್.ಪಾಟೀಲ. ಟಿ.ಪಿ. ಲಮಾಣಿ ಹಾಗೂ ಇಗೀನ ಪ್ರಭಾರ ಮುಖ್ಯ ಶಿಕ್ಷಕ ಪಿ.ವಿ. ಜಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.