ಇಳಕಲ್: ಆನ್‌ಲೈನ್ ಮೂಲಕ ಖರೀದಿಸಿದ ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಕೈ ಬೆರಳುಗಳು ಛಿದ್ರಗೊಂಡಿರುವ ಘಟನೆ ನಡೆದಿದೆ.
ಇಲ್ಲಿಯ ಬಸವನಗರದ ನಿವಾಸಿ ಶಶಿಕಲಾ ಎನ್ನುವವರ ವಿಳಾಸ ನೀಡಿ ರಕ್ಕಸಗಿ ಗ್ರಾಮದ ಬಸವರಾಜೇಶ್ವರಿ ಯರನಾಳ ಎಂಬುವವರು ಆನ್‌ಲೈನ್ ಮೂಲಕ ಹೇರ್ ಡ್ರೈಯರ್ ಖರೀದಿಸಿದ್ದರು. ಪಾರ್ಸೆಲ್ ಓಪನ್ ಮಾಡಿ ಸ್ವಿಚ್ ಆನ್ ಮಾಡಿದ ಕೂಡಲೇ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದೆ. ಬಸವರಾಜೇಶ್ವರಿ ಅವರ ಎರಡು ಕೈಗಳ ಒಟ್ಟು 8 ಬೆರಳುಗಳು ಛಿದ್ರಗೊಂಡಿವೆ. ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ವಿಜಯಾನಂದ ಕಾಶಪ್ಪನವರ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯ ಮಾಹಿತಿ ಪಡೆದು, ಗಾಯಾಳುವಿಗೆ ಸಾಂತ್ವನ ಹೇಳಿದರು. ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.