ADVERTISEMENT

ವಚನ ಸಾಹಿತ್ಯ ವಿಶ್ವಕ್ಕೆ ಪರಿಚಯಿಸಿದ ಹಳಕಟ್ಟಿ: ಗುರುಮಹಾಂತ ಶ್ರೀ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:11 IST
Last Updated 4 ಜುಲೈ 2024, 14:11 IST
ಹುನಗುಂದ ಪಟ್ಟಣದ ಶ್ವೇತಾ ಹಾಗೂ ಪ್ರೊ.ಬಿ.ಎ.ಕಂಠಿ ಶರಣ ದಂಪತಿ ಮನೆಯಲ್ಲಿ ನಡೆದ ಡಾ.ಫ.ಗು.ಹಳಕಟ್ಟಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗುರುಮಹಾಂತ ಶ್ರೀ ಮಾತನಾಡಿದರು
ಹುನಗುಂದ ಪಟ್ಟಣದ ಶ್ವೇತಾ ಹಾಗೂ ಪ್ರೊ.ಬಿ.ಎ.ಕಂಠಿ ಶರಣ ದಂಪತಿ ಮನೆಯಲ್ಲಿ ನಡೆದ ಡಾ.ಫ.ಗು.ಹಳಕಟ್ಟಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗುರುಮಹಾಂತ ಶ್ರೀ ಮಾತನಾಡಿದರು   

ಹುನಗುಂದ: ‘12ನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಸಂಗ್ರಹಕ್ಕಾಗಿ ಮನೆ ಮನೆಗೆ, ಮಠ ಮಾನ್ಯಗಳಿಗೆ ಭೇಟಿ ನೀಡಿ ವಚನಗಳ ತಾಡೋಲೆಗಳನ್ನು ಸಂಗ್ರಹಿಸಿ ಮುದ್ರಣ ಮಾಡಿ ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ’ ಎಂದು ಚಿತ್ತರಗಿ ಇಳಕಲ್‌ನ ಗುರುಮಹಾಂತ ಶ್ರೀ ಹೇಳಿದರು.

ನಗರದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ತಾಲ್ಲೂಕು ವಚನ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಪಟ್ಟಣದ ಶ್ವೇತಾ ಹಾಗೂ ಪ್ರೊ.ಬಿ.ಎ.ಕಂಠಿ ದಂಪತಿ ಮನೆಯಲ್ಲಿ ಈಚೆಗೆ ನಡೆದ ಡಾ.ಫ.ಗು.ಹಳಕಟ್ಟಿ ಅವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ಪ್ರಭು ಮಾಲಗಿತ್ತಿಮಠ ಮಾತನಾಡಿ, ‘ವಚನ ಸಾಹಿತ್ಯಕ್ಕೆ ಮಾರು ಹೋಗಿದ್ದ ಹಳಕಟ್ಟಿ ಅವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನ ಸಂಕಲನ ಕೃತಿಗಳು ಸಾರಸ್ವತ ಲೋಕದ ಮಾಣಿಕ್ಯಗಳಾಗಿವೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್.ಎನ್.ಹಾದಿಮನಿ ಮಾತನಾಡಿ, ಹಳಕಟ್ಟಿ ಅವರು ವಚನ ಸಾಹಿತ್ಯ ಮುದ್ರಣ ಮಾಡಲು ತಮ್ಮ ಮನೆ- ಹೊಲ ಮಾರಾಟ ಮಾಡಿ, ಮುದ್ರಣಾಲಯ ಪ್ರಾರಂಭಿಸಿ ವಚನ ಸಾಹಿತ್ಯವನ್ನು ಮುದ್ರಿಸಿ ಶರಣನ್ನು ನಾಡಿಗೆ ವಚನ ಪರಿಚಯಿಸಿ ‘ವಚನ ಸಾಹಿತ್ಯದ ಯುಗ ಪುರುಷ ' ಎಂದು ಕರೆಸಿಕೊಂಡಿದ್ದಾರೆ’ ಎಂದು ಹೇಳಿದರು.

ಪರಿಷತ್ತಿನ ಕಾರ್ಯದರ್ಶಿ ಸಂಗಮೇಶ ಹೊದ್ಲೂರ ಸ್ವಾಗತಿಸಿ, ವಂದಿಸಿದರು. ಭಕ್ತಿ ಸೇವೆ ಮಾಡಿದ ಪ್ರೊ.ಬಿ.ಎ.ಕಂಠಿ ದಂಪತಿಯನ್ನು ಗುರುಮಹಾಂತ ಶ್ರೀ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.