ADVERTISEMENT

ಒತ್ತಡ ಮುಕ್ತ ಬದುಕಿನಿಂದ ಬಂಜೆತನ ನಿವಾರಣೆ ಸಾಧ್ಯ

ಡಾ.ಬಸವರಾಜ.ಎಸ್ ಬಂಟನೂರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:13 IST
Last Updated 21 ಅಕ್ಟೋಬರ್ 2024, 14:13 IST
ಗುಳೇದಗುಡ್ಡ ಪಟ್ಟಣದ ಬನಶಂಕರಿ ಆಸ್ಪತ್ರೆಯಲ್ಲಿ ಜರುಗಿದ ಬಂಜೆತನ ನಿವಾರಣೆ ಉಚಿತ ಶಿಬಿರವನ್ನು ಡಾ. ಬಸವರಾಜ ಬಂಟನೂರ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು
ಗುಳೇದಗುಡ್ಡ ಪಟ್ಟಣದ ಬನಶಂಕರಿ ಆಸ್ಪತ್ರೆಯಲ್ಲಿ ಜರುಗಿದ ಬಂಜೆತನ ನಿವಾರಣೆ ಉಚಿತ ಶಿಬಿರವನ್ನು ಡಾ. ಬಸವರಾಜ ಬಂಟನೂರ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು   

ಗುಳೇದಗುಡ್ಡ: ಸೇವಿಸುವ ಆಹಾರದ ಪದ್ದತಿ, ಅಶುದ್ಧ ಗಾಳಿ, ನೀರು, ಒತ್ತಡದಲ್ಲಿ ಬದುಕುವ ಜೀವನ, ಸಕಾಲದಲ್ಲಿ ನಡೆಯದ ಮದುವೆ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಡಾ.ಬಸವರಾಜ.ಎಸ್ ಬಂಟನೂರ ಹೇಳಿದರು.

ಅವರು ಪಟ್ಟಣದ ಬನಶಂಕರಿ ಆಸ್ಪತ್ರೆಯಲ್ಲಿ ನಡೆದ ಬಂಜೆತನ ನಿವಾರಣೆ ಉಚಿತ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಡಾ.ಸಂಧ್ಯಾ ಮಿಶ್ರಾ ಅವರು ಕಳೆದ 19 ವರ್ಷಗಳಿಂದ ಬಂಜೆತನ ಚಿಕಿತ್ಸಾ ವಿಭಾಗದ ತಜ್ಞ ವೈದ್ಯರಾಗಿ ತಮ್ಮ ಸೇವೆ ಜನರಿಗೆ ನೀಡುತ್ತ ಬಂದಿದ್ದಾರೆ. ಗುಳೇದಗುಡ್ಡ ಪಟ್ಟಣದ ಸುತ್ತ ಮುತ್ತಲಿನ ಹಲವು ದಂಪತಿಗಳಿಗೆ ಸಲಹೆ, ಸೂಕ್ತ ರೀತಿಯಲ್ಲಿ ಚಿಕಿತ್ಸಾ ಕ್ರಮಗಳ ಸಲಹೆ ನೀಡಿದ್ದಾರೆ. ಯಾಂತ್ರಿಕ ಯುಗದಲ್ಲಿ ಜೀವನ ನಡೆಸುವ ಪದ್ದತಿ, ಆಹಾರ ಸೇವಿಸುವ ಕ್ರಮ ಬಂಜೆತನಕ್ಕೆ ಕಾರಣವಾಗುತ್ತದೆ. ಇದಕ್ಕಾಗಿ ಸೂಕ್ತವಾದ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಅನುಭವವನ್ನು ಹೊಂದಿರುವ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಬೆಂಗಳೂರಿನ ಮಿಲನ್ ಫರ್ಟಿಲಿಟಿ ಆಸ್ಪತ್ರೆ, ಡಾ.ಸಂಧ್ಯಾ ಮಿಶ್ರಾ ಇವರ ಸಹಯೋಗದೊಂದಿಗೆ ನಡೆದ ಬಂಜೆತನ ಉಚಿತ ತಪಾಸಣೆ ಶಿಬಿರದಲ್ಲಿ ಸಂಸ್ಥೆಯ ರಾಜ್ಯ ಮಾರುಕಟ್ಟೆ ಅಧಿಕಾರಿಗಳು ಮಂಜುನಾಥ ಎಚ್.ಕೆ, ಲಾಲಸಾಬ ನಧಾಫ್, ನೂರೇಶ ನಿಡಗುಂದಿ, ಶಿವು ಉದ್ನೂರ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಶಿಬಿರದಲ್ಲಿ 30ಕ್ಕೂ ಹೆಚ್ಚು ದಂಪತಿಗಳಿಗೆ ಸೂಕ್ತ ಸಮಾಲೋಚನೆ ನಡೆಸಿ, ಚಿಕಿತ್ಸೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.