ಜಮಖಂಡಿ: ಶ್ರವಣ ಬೆಳಗೋಳದ ಗೊಮ್ಮಟೇಶ್ವರನ ಬೆಟ್ಟವನ್ನು 125 ಕೆಜಿ ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತು ಹತ್ತುವ ಮೂಲಕ ಸಾಹಸಿ ಭಕ್ತರೊಬ್ಬರು ಭಾನುವಾರ ನೋಡುಗರನ್ನು ಬೆರಗುಗೊಳಿಸಿದ್ದಾರೆ.
ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದ 43 ವರ್ಷದ ಹನಮಂತ ಪರಸಪ್ಪ ಸರಪಳಿ ಎಂಬ ಭಕ್ತ 700 ಮೆಟ್ಟಿಲುಗಳನ್ನು ಕೇವಲ 41 ನಿಮಿಷಗಳಲ್ಲಿ ಹತ್ತಿ, 125 ಕೆಜಿ ಜೋಳದ ಚೀಲವನ್ನು ಬೆಳಗೋಳದ ಗೊಮ್ಮಟೇಶ್ವರ ದಿಗಂಬರ ಜೈನ ಮಂದಿರ ಮಠಕ್ಕೆ ಸಮರ್ಪಿಸಿ ಭಕ್ತಿ ಮೆರೆದಿದ್ದಾರೆ.
ಬೆಟ್ಟದ ಮೇಲಿನ ಆವರಣದಲ್ಲಿ ಹನಮಂತ ಅವರನ್ನು ಕಮಿಟಿಯವರು, ಸ್ನೇಹಿತರು ಹಾಗೂ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದ್ದಾರೆ.
ಉಮೇಶ ಜೋತ್ಯಪ್ಪನವರˌ ಸಿದ್ರಾಮ ಇಟ್ಟಿ, ಸೈದು ಕಡಪಟ್ಟಿˌ ಹನಮಂತ ಜಕ್ಕನ್ನವರˌ ಭುಜಬಲಿ ಪಟ್ಟನವರˌ ಮುರಗಯ್ಯ ಪಾಲಭಾವಿಮಠˌ ರಾಜು ಕವಟಗಿˌ ಅನೀಲ ಮಾದರˌ ಅಭೀಷೇಕ ಸರಪಳಿˌ ರಾಕೇಶ ಸರಪಳಿˌ ಮಹಮ್ಮದ ಪೆಂಡಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.