ADVERTISEMENT

ಜಮಖಂಡಿ ತಾಲ್ಲೂಕಿಗೆ ಹಿಪ್ಪರಗಿ ಮರುಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 16:14 IST
Last Updated 30 ಜೂನ್ 2024, 16:14 IST

ಜಮಖಂಡಿ: ರಾಜ್ಯದಲ್ಲಿ ಹೊಸ ತಾಲ್ಲೂಕುಗಳ ರಚನೆಯ ಬಳಿಕ ರಬಕವಿ-ಬನಹಟ್ಟಿ ತಾಲ್ಲೂಕಿಗೆ ಸೇರ್ಪಡೆಯಾಗಿದ್ದ ಹಿಪ್ಪರಗಿ ಗ್ರಾಮವನ್ನು ಜಮಖಂಡಿ ತಾಲ್ಲೂಕಿಗೆ ಮರುಸೇರ್ಪಡೆಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ ಭೂಮಾಪನ) ಎಸ್. ಗುರುಮೂರ್ತಿ ಅಧಿಸೂಚನೆ ಹೊರಡಿಸಿದ್ದಾರೆ.

ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಗ್ರಾಮವನ್ನು ಜಮಖಂಡಿ ತಾಲ್ಲೂಕಿಗೆ ಸೇರ್ಪಡೆಗೊಳಿಸಿ ಜೂನ್‌ 14 ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಜೂನ್‌ 24ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ಅಧಿಸೂಚನೆ ಮಾಹಿತಿಯನ್ನು ಅಗತ್ಯ ಕ್ರಮದ ಸಲುವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳ ಗಮನಕ್ಕೆ ತರುವಂತೆ ಹಾಗೂ ಗ್ರಾಮದ ದಾಖಲಾತಿಗಳನ್ನು ಕಾಲೋಚಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಅಧೀನ ಕಾರ್ಯದರ್ಶಿಗಳು ನಿರ್ದೇಶನ ನೀಡಿದ್ದಾರೆ ಎಂದು ತಮ್ಮ ಗ್ರಾಮವನ್ನು ಜಮಖಂಡಿ ತಾಲ್ಲೂಕಿಗೆ ಮರುಸೇರ್ಪಡೆಗೊಳಿಸಲು 7 ವರ್ಷದಿಂದ ನಿರಂತರ ಹೋರಾಟ ನಡೆಸಿದ ನಾಗೇಶ ಜತ್ತಿ ತಿಳಿಸಿದ್ದಾರೆ.

ADVERTISEMENT

ರಬಕವಿ-ಬನಹಟ್ಟಿ ತಾಲ್ಲೂಕಿಗೆ ನಮ್ಮ ಗ್ರಾಮವನ್ನು ಸೇರಿಸಿದ್ದರಿಂದ ಸರ್ಕಾರಿ ಕೆಲಸಗಳನ್ನು ಮಾಡಿಕೊಳ್ಳಲು ಬಹಳ ತೊಂದರೆ ಆಗಿತ್ತು. ಸರ್ಕಾರ ನಮ್ಮ ಗ್ರಾಮವನ್ನು ಹಳೇ ತಾಲ್ಲೂಕಿಗೆ ಮರು ಸೇರ್ಪಡೆ ಮಾಡಿದ್ದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹಿಪ್ಪರಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.