ಬಾಗಲಕೋಟೆ: ಸರ್ಕಾರಿ ಶಾಲೆಗಳ ದೇಖರೇಕಿ ವಿಚಾರದಲ್ಲಿ ಇಳಕಲ್ ತಾಲ್ಲೂಕಿನ ಹಿರೇಶಿವನಗುತ್ತಿ ಗ್ರಾಮ ರಾಜ್ಯಕ್ಕೆ ಮಾದರಿ ಎನಿಸಿದೆ.
ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಲಾ ₹3 ಸಾವಿರ ದೇಣಿಗೆ ನೀಡಿ, ಶಾಲೆಯ ಹಳೆ ವಿದ್ಯಾರ್ಥಿ ರಮೇಶ ಕುಲಕರ್ಣಿ ಹಾಗೂ ಊರಿನಮುಖಂಡ ಅಮರೇಗೌಡ (ಮುತ್ತಣ್ಣ) ಪಾಟೀಲ ಮೂಲಿಮನಿ ಅವರಿಂದ ₹50 ಸಾವಿರ ನೆರವು ಪಡೆದು ಶಾಲೆಯನ್ನು ದುರಸ್ತಿ ಮಾಡಿಸಿದ್ದಾರೆ. 134 ವರ್ಷಗಳ ಹಳೆಯದಾದ ಈ ಶಾಲೆ ಈಗ ಹಸಿರು ಹೊದ್ದು, ಸುಣ್ಣ–ಬಣ್ಣದಿಂದ ಕಂಗೊಳಿಸುತ್ತಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಅಲ್ಲಿನ ಡಿ ದರ್ಜೆ ನೌಕರಮಹಿಬೂಬ್ ಆಗ್ರಾ ತಮ್ಮ ಮಗನ ಹುಟ್ಟುಹುಬ್ಬಕ್ಕೆ ₹30 ಸಾವಿರ ವೆಚ್ಚದಲ್ಲಿ ಬಣ್ಣ ಬಳಿಸಿದ್ದಾರೆ.
ದತ್ತು ಪಡೆಯುವುದು ಬೇರೆ, ವಿವೇಚನೆ ಬೇರೆ: ‘ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳ ದತ್ತು ಪಡೆಯುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮ. ಅದರಲ್ಲಿ ಅವರ ವೈಯಕ್ತಿಕ ನೆರವು ಇರುವುದಿಲ್ಲ. ದತ್ತು ಪಡೆದ ಶಾಲೆಗಳಿಗೆ ತಮ್ಮ ನಿಧಿಯಿಂದ ಅನುದಾನ ಏನೂ ಕೊಡುವುದಿಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
‘ಶಾಸಕರು, ಸಂಸದರು ಸ್ವಯಂಪ್ರೇರಿತವಾಗಿ ಪ್ರತಿ ವರ್ಷ ಐದೈದು ಶಾಲೆಗಳಿಗೆ ಕನಿಷ್ಠ ₹10 ಲಕ್ಷ ಕೊಟ್ಟರೂ ಅವರ ಅಧಿಕಾರಾವಧಿಯಲ್ಲಿ 25 ಶಾಲೆಗಳು ಅಭಿವೃದ್ಧಿಯಾಗುತ್ತವೆ. ಆ ವಿವೇಚನೆ ಪ್ರದರ್ಶಿಸಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.