ADVERTISEMENT

ಹುನಗುಂದ | ತಾಯಿ ಮತ್ತು ಮಕ್ಕಳ ಆಸ್ಪತ್ರೆ: ಸ್ಥಳ ಪರಿಶೀಲಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 15:45 IST
Last Updated 12 ಜೂನ್ 2024, 15:45 IST
ಹುನಗುಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಬಯಲು ಸ್ಥಳದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ನಿರ್ಮಾಣದ ಸ್ಥಳವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಪರಿಶೀಲಿಸಿದರು
ಹುನಗುಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಬಯಲು ಸ್ಥಳದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ನಿರ್ಮಾಣದ ಸ್ಥಳವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಪರಿಶೀಲಿಸಿದರು   

ಹುನಗುಂದ: ಪಟ್ಟಣದಲ್ಲಿ ನಿರ್ಮಿಸಲಾಗುವ ಯೋಜಿತ 50 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ (ಎಂಸಿಎಚ್) ಆಸ್ಪತ್ರೆ ಸ್ಥಳವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಪರಿಶೀಲಿಸಿದರು.

ಇಲ್ಲಿಯ ಸಾರ್ವಜನಿಕ ಆಸ್ಪತ್ರೆ ಲೇಔಟ್ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ, ಅಲ್ಲಿ ಕಾರ್ಯ ನಿರ್ವಹಿಸುವ ಕಚೇರಿ ಕಟ್ಟಡ, ಶಿಥಿಲಗೊಂಡಿರುವ ಕಟ್ಟಡ ಹಾಗೂ ಬಯಲು ಜಾಗ ಪ್ರದೇಶವನ್ನು ನಕ್ಷೆ ಸಮೇತ ವೀಕ್ಷಿಸುತ್ತ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿದರು.

‘ಭವಿಷ್ಯದಲ್ಲಿ ತೊಂದರೆಯಾಗದಂತೆ ಸುರಕ್ಷಿತ ಸ್ಥಳದಲ್ಲಿ ಈ ಆಸ್ಪತ್ರೆ ನಿರ್ಮಾಣ ಆಗಬೇಕಾಗಿದೆ. ಹುನಗುಂದ ತಾಲ್ಲೂಕಿಗೆ ಈ ಆಸ್ಪತ್ರೆ ಅವಶ್ಯಕ. ಈಗಾಗಲೇ ಈ ಆಸ್ಪತ್ರೆ ನಿರ್ಮಾಣದ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇಷ್ಟರಲ್ಲೇ ಮಂಜೂರಾತಿ ಸಿಗಲಿದೆ’ ಎಂದರು.

ADVERTISEMENT

ಆರೋಗ್ಯ ಇಲಾಖೆ ಎಂಜಿನಿಯರ್‌ ಸ್ಥಳದ ಮಾಹಿತಿ ನೀಡಿದರು. ಸದ್ಯ ಕಾರ್ಯನಿರ್ವಹಿಸುವ ಕಟ್ಟಡಗಳಿಗೆ ಯಾವುದೇ ತೊಂದರೆ ಆಗದಂತೆ ಮತ್ತು ಶಿಥಿಲಾವಸ್ಥೆಯಲ್ಲಿರುವ  ಕಟ್ಟಡಗಳನ್ನು ತೆರವುಗೊಳಿಸಿ ಪಾರ್ಕಿಂಗ್, ಗಾರ್ಡನ್ ಸಮೇತ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ನಿಗದಿಗೊಳಿಸಬೇಕು ಎಂದು ಶಾಸಕ ಕಾಶಪ್ಪನವರ ಅಧಿಕಾರಿಗಳಿಗೆ ಸೂಚಿಸಿದರು

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಂಜುನಾಥ ಅಂಕೋಲ್ಕರ, ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಶಿವಾನಂದ ಕಂಠಿ, ರಾಜು ಬೋರಾ, ವಿಜಯ ಗದ್ದನಕೇರಿ, ಶಾಂತಕುಮಾರ ಸುರಪೂರ, ಪರವೇಜ್ ಖಾಜಿ, ನಿಜಾಮುದ್ದೀನ ಖಾದ್ರಿ, ಆರೋಗ್ಯ ಅಭಿಯಂತರ ಎಂ.ಎಂ. ಕಟ್ಟಿಮನಿ, ಮಹಾಂತೇಶ ಮದರಿ, ನಗರ ಮಾಪಕ ಮುರಗೇಶ ಕೊಳಮಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.