ಮಹಾಲಿಂಗಪುರ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಮತ್ತು ಡಿ.ಡಿ.ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ವತಿಯಿಂದ ಪ್ರೇಮಚಂದ ಜಯಂತಿಯನ್ನು ಈಚೆಗೆ ಆಚರಿಸಲಾಯಿತು.
ರಾಮದುರ್ಗದ ಸಿಎಸ್‌ಬಿ ಕಲಾ, ಎಸ್‌ಎಂಆರ್‌ಪಿ ವಿಜ್ಞಾನ ಮತ್ತು ಜಿಎಲ್‌ಆರ್ ವಾಣಿಜ್ಯ ಪದವಿ ಕಾಲೇಜಿನ ಉಪನ್ಯಾಸಕಿ ಡಾ.ವರ್ಷಾರಾಣಿ ಜಬಡೆ ಮಾತನಾಡಿ, ಅಮರ ಕಥೆಗಾರ ಪ್ರೇಮಚಂದರ ಜೀವನ ತತ್ವ ಆದರ್ಶಗಳನ್ನು ಹಾಗೂ ಶ್ರೇಷ್ಠ ಬರಹಗಾರರಾಗಲು ಮಾಡಿದ ಹೋರಾಟ ಮತ್ತು ಅವರ ವಿವಿಧ ರಚನೆಗಳಲ್ಲಿ ಬಿಂಬಿತವಾದ ಜೀವನ ಮೌಲ್ಯಗಳು ಮಾದರಿಯಾದದು ಎಂದರು.
ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೇಮಚಂದ ಒಬ್ಬ ಶ್ರೇಷ್ಠ ಬರಹಗಾರ. ಅವರ ಪ್ರಮುಖ ಕೃತಿಗಳು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ ಎಂದರು.
ಐಕ್ಯೂಎಸಿ ಸಂಯೋಜಕಿ ಡಾ.ಎಸ್.ಡಿ.ಸೊರಗಾಂವಿ, ಹಿಂದಿ ವಿಭಾಗದ ಮುಖ್ಯಸ್ಥ ಪಿ.ಎಂ.ಗೌಳಿ, ವಿ.ಎ.ಅಡಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.