ಕೆ.ಆರ್.ಪುರ: ಪ್ರಮುಖ ಆಹಾರ ಮತ್ತು ಕೃಷಿ ತಂತ್ರಜ್ಞಾನ ಸಂಸ್ಥೆ ‘ವೇ ಕೂಲ್ ಫುಡ್ಸ್’ ವತಿಯಿಂದ ಸಮೀಪದ ಕನ್ನಮಂಗಲದ ವಿತರಣಾ ಕೇಂದ್ರದ ಬಳಿ 7,632 ಚದರಅಡಿಗಳಷ್ಟು ವಿಸ್ತಾರವಾದ ‘ಆಹಾರ ಧ್ವಜ’ ರಚಿಸಿದೆ.
ಭಾರತ ಅಗತ್ಯಕ್ಕಿಂತ ಹೆಚ್ಚು ಆಹಾರ ಉತ್ಪಾದಿಸುತ್ತಿರುವ ರಾಷ್ಟ್ರವಾಗಿ ಯಶಸ್ವಿಯಾಗಿ ಸ್ಥಿತ್ಯಂತರಗೊಂಡಿರುವ ಸಂಕೇತವಾಗಿ ಈ ಆಹಾರದ ಧ್ವಜ ರೂಪಿಸಲಾಗಿದೆ. ಇಂದು ಭಾರತ ಹಣ್ಣುಗಳು ಮತ್ತು ತರಕಾರಿಗಳ ಅತಿದೊಡ್ಡ ಉತ್ಪಾದನೆಯ ರಾಷ್ಟ್ರಗಳಲ್ಲಿ ಒಂದಾಗಿದೆ. ಧ್ವಜ ರಚನೆಯಲ್ಲಿ ಬಳಸಲಾಗುತ್ತಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಕಾರ್ಯಕ್ರಮದ ನಂತರ ಅಕ್ಷಯ ಪಾತ್ರ ಫೌಂಡೇಶನ್‌ಗೆ ನೀಡಲಾಯಿತು.
ಮನೆ, ಮನೆಯಲ್ಲಿ ತ್ರಿವರ್ಣ ಧ್ವಜದ ಅಭಿಯಾನದಭಾಗವಾಗಿ, ವೇ ಕೂಲ್ ಫುಡ್ಸ್ ಸಂಸ್ಥೆ ಭಾರತದಲ್ಲಿ ಬೆಳೆದ ತಾಜಾ ಉತ್ಪನ್ನಗಳಾದ ಗಜ್ಜರಿ, ಮೂಲಂಗಿ, ಹಸಿರು ಬೆಂಡೆಕಾಯಿ, ಬೀನ್ಸ್, ದಪ್ಪಮೆಣಸಿನಕಾಯಿ ಮುಂತಾದವುಗಳ ಉತ್ತಮ ಆಯ್ಕೆಯೊಂದಿಗೆ ಧ್ವಜದ ತ್ರಿವರ್ಣಗಳನ್ನು ಯಶಸ್ವಿಯಾಗಿ ಮರುಸೃಷ್ಟಿಸಿದೆ.
ಧ್ವಜ ನಿರ್ಮಿಸಲು 20 ಟನ್‌ಗಳಿಗಿಂತ ಹೆಚ್ಚು ತಾಜಾ ಉತ್ಪನ್ನಗಳನ್ನು ಬಳಸಲಾಗಿತ್ತು. ಇದು ಭಾರತದ ಬಹುಮುಖಿ ವ್ಯಕ್ತಿತ್ವ ಮತ್ತು ಕೃಷಿ ಉತ್ಪನ್ನದ ವೈವಿಧ್ಯವನ್ನು ಪ್ರದರ್ಶಿಸುತ್ತದೆ, ಧ್ವಜಕ್ಕೆ ಕೇಸರಿ ಬಣ್ಣವನ್ನು ಗಜ್ಜರಿಗಳಿಂದ, ಮೂಲಂಗಿ ಮತ್ತು ಆಲೂಗಡ್ಡೆ ತುಂಡುಗಳಿಂದ ಬಿಳಿ ಬಣ್ಣವನ್ನು ರೂಪಿಸಲಾಯಿತು. ಕ್ಯಾಪ್ಸಿಕಂ, ಬೀನ್ಸ್ ಮತ್ತು ಬೆಂಡೆಕಾಯಿಗಳೊಂದಿಗೆ ಹಸಿರು ಬಣ್ಣವನ್ನು ರೂಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.