ADVERTISEMENT

ಸ್ವಾತಂತ್ರೋತ್ಸವಕ್ಕೆ ‘ಗೂಗಲ್‌’ ಶುಭಾಶಯ: ಡೂಡಲ್‌ನಲ್ಲಿ ಇಳಕಲ್‌ ಸೀರೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 5:28 IST
Last Updated 16 ಆಗಸ್ಟ್ 2023, 5:28 IST
ಇಳಕಲ್‌ ಸೀರೆಯ ವಿಶೇಷ ಟೋಪತೇನಿ ಸೆರಗು ಬಳಸಿ ಸ್ವಾತಂತ್ರೋತ್ಸವ ಅಂಗವಾಗಿ ಗೂಗಲ್‌ನಲ್ಲಿ ಕಂಡುಬಂದ ವಿಶೇಷ ಡೂಡಲ್‌ (ಇಳಕಲ್‌ ಸೀರೆಯ ಸೆರಗು ಕೆಳಗಿನ ಸಾಲಿನಲ್ಲಿ ಎಡದಿಂದ 5ನೇಯದ್ದು)
ಇಳಕಲ್‌ ಸೀರೆಯ ವಿಶೇಷ ಟೋಪತೇನಿ ಸೆರಗು ಬಳಸಿ ಸ್ವಾತಂತ್ರೋತ್ಸವ ಅಂಗವಾಗಿ ಗೂಗಲ್‌ನಲ್ಲಿ ಕಂಡುಬಂದ ವಿಶೇಷ ಡೂಡಲ್‌ (ಇಳಕಲ್‌ ಸೀರೆಯ ಸೆರಗು ಕೆಳಗಿನ ಸಾಲಿನಲ್ಲಿ ಎಡದಿಂದ 5ನೇಯದ್ದು)   

ಇಳಕಲ್‌ (ಬಾಗಲಕೋಟೆ ಜಿಲ್ಲೆ): ಭಾರತದ ವೈವಿಧ್ಯಮಯ ಜವಳಿ ಪರಂಪರೆಯನ್ನು ಬಿಂಬಿಸುವ ಡೂಡಲ್‌ ಮೂಲಕ ಸ್ವಾತಂತ್ರೋತ್ಸವಕ್ಕೆ ‘ಗೂಗಲ್‌’ ಶುಭಾಶಯ ಕೋರಿದ್ದು, ಈ ವಿಶೇಷ ಡೂಡಲ್‌ನಲ್ಲಿ ದೇಶದ ಪ್ರಮುಖ 20 ಪ್ರಕಾರದ ಸೀರೆಗಳಲ್ಲಿ ಇಳಕಲ್‌ ಸೀರೆಯೂ ಸ್ಥಾನ ಪಡೆದಿದೆ.

ದೆಹಲಿ ಕಲಾವಿದೆ ನಮ್ರತಾ ಕುಮಾರ್‌ ಅವರು ಈ ಡಿಜಿಟಲ್‌ ಕಲಾಕೃತಿ ರಚಿಸಿದ್ದು, ವಿವಿಧ ರಾಜ್ಯಗಳಲ್ಲಿ ಸಿದ್ಧಗೊಳ್ಳುವ ವಿಶೇಷ ಸೀರೆಗಳನ್ನು ಇದು ಒಳಗೊಂಡಿದೆ. ಇಳಕಲ್‌ ಸೀರೆಯ ‘ಟೋಪತೇನಿ’ ವಿನ್ಯಾಸದ ವಿಶಿಷ್ಟ ಸೆರಗನ್ನು ಕಲಾಕೃತಿಯಲ್ಲಿ ಬಳಸಿಕೊಳ್ಳಲಾಗಿದೆ.

ಈ ವಿಶೇಷ ಡೂಡಲ್‌ನ್ನು ನಗರದ ಯುವಕರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.