ADVERTISEMENT

ಜಗಜೀವನರಾಂ ಆದರ್ಶ ಅಳವಡಿಸಿಕೊಳ್ಳಿ: ತಹಶೀಲ್ದಾರ್‌ ಮಂಗಳಾ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 15:50 IST
Last Updated 5 ಏಪ್ರಿಲ್ 2024, 15:50 IST
ಗುಳೇದಗುಡ್ಡ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು
ಗುಳೇದಗುಡ್ಡ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು   

ಗುಳೇದಗುಡ್ಡ: ದೇಶದ ಉಪ ಪ್ರಧಾನ ಮಂತ್ರಿಯಾಗಿ ಶೋಷಿತರ ಪ್ರವಾಗಿ ಉತ್ತಮ ಕೆಲಸ ಮಾಡಿದ ಬಾಬು ಜಗಜೀವನರಾಂ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ತಹಶೀಲ್ದಾರ್‌ ಮಂಗಳಾ ಎಂ.ಹೇಳಿದರು.

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಬಾಬು ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಉಪ ತಹಶೀಲ್ದಾರ್‌ ವೀರೇಶ ಬಡಿಗೇರ, ಮಲ್ಲಿಕಾರ್ಜುನ ತುಪ್ಪದ ಹಾಗೂ ಕಚೇರಿ ಸಿಬ್ಬಂದಿ ಇದ್ದರು.

ADVERTISEMENT

ಜಯಂತಿ ಆಚರಣೆ: ಭಂಡಾರಿ ಮತ್ತು ರಾಠಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು, ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಬಿ.ಎಡ್ ಕಾಲೇಜು, ಬಾಲಕರ ಮತ್ತು ಬಾಲಕೀಯರ ಸರ್ಕರಿ ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಬಾಬು ಜಗಜೀವನರಾಂ ಜನ್ಮದಿನ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.