ADVERTISEMENT

ಜಮಖಂಡಿ: ಕೃಷ್ಣಮೃಗ ಮಾಂಸ, ಚರ್ಮ ಸಾಗಿಸುತ್ತಿದ್ದ ಏಳು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 19:57 IST
Last Updated 15 ಜೂನ್ 2024, 19:57 IST
   

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಕೃಷ್ಣಮೃಗವನ್ನು ಬೇಟೆಯಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಏಳು ಮಂದಿ ಆರೋಪಿಗಳನ್ನು ಇಲ್ಲಿನ ಉಪವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ರಾಯಬಾಗ ತಾಲ್ಲೂಕಿನ ಕಡಕಬಾವಿ ಗ್ರಾಮದ ಸುಭಾಷ ಸಿದ್ದಪ್ಪ ಪಿಡಾಯಿ (23), ಬ್ಯಾಕೋಡ ಗ್ರಾಮದ ಸುರೇಶ ನಿಂಗಪ್ಪ ಪಕಾಂಡೆ (21), ಚೇತನ ಹಣಮಂತ ಬಿದರಿ (24), ಕಂಕಣವಾಡಿ ಗ್ರಾಮದ ನಿಂಗಪ್ಪ ಲಕ್ಷ್ಮಣ ಪಡತಾರೆ (24), ದೇವಪ್ಪರಟ್ಟಿ ಗ್ರಾಮದ ಪ್ರಜ್ವಲ ಬಾಳಪ್ಪ ಮೆಳವಂಕಿ (18), ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಿಂಗಳಿ ಗ್ರಾಮದ ಶಬ್ಬಿರ್ ಅಬ್ದುಲ್‌ಸಾಬ್ ಗುಡ್ಡದಮನಿ (25), ರಮಜಾನಸಾಬ್ ಇಮಾಮ್‌ಸಾಬ್ ಅಲಸ್ (25) ಬಂಧಿತರು. ಹಳಿಂಗಳಿ ಗ್ರಾಮದ ಲಾಲಸಾಬ್ ಸರ್ದಾರಸಾಬ್ ಗುಡ್ಡದಮನಿ, ಹನಗಂಡಿ ಗ್ರಾಮದ ರಮಜಾನ್‌ಸಾಬ್ ಇಸ್ಮಾಯಿಲ್‌ಸಾಬ್ ಅಲಾಸ್ ತಪ್ಪಿಸಿಕೊಂಡಿದ್ದಾರೆ’ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಕೃಷ್ಣ ಮೃಗದ 13.5 ಕೆ.ಜಿ ಮಾಂಸ ಮತ್ತು ಚರ್ಮ, ನಾಲ್ಕು ಮೊಬೈಲ್ ಫೋನ್, ಕಾರು, ನಾಲ್ಕು ಬೇಟೆ ನಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಡಿಸಿಎಫ್‌ಪಿ ಶ್ರೀಧರ ನೇತೃತ್ವದಲ್ಲಿ ಎಸಿಎಫ್ ರಾಜೇಶ್ವರಿ ಈರನಟ್ಟಿ, ಆರ್‌ಎಫ್‌ಒ ಪವನ ಕುರನಿಂಗ, ಹಣಮಂತ ಧೋನಿ, ಡಿವೈಆರ್‌ಎಫ್‌ಒ ಅಶ್ವಿನಿ ಮಾನಮಿ, ಅರಣ್ಯಾಧಿಕಾರಿ ಆರ್.ಬಿ. ಮೇತ್ರಿ, ಎಸ್.ಎಚ್. ಕುಳಲಿ, ನೀರಿಕ್ಷಕ ಸದಾಶಿವ ಮಾಂಗ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.