ADVERTISEMENT

ಕಲಾದಗಿ: ಸ್ವಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 12:52 IST
Last Updated 6 ಆಗಸ್ಟ್ 2024, 12:52 IST
‌ಸಚಿವ ಆರ್.ಬಿ. ತಿಮ್ಮಾಪುರ ಅವರು ಕಲಾದಗಿ ಸಮೀಪದ ಖಜ್ಜಿಡೋಣಿ ಗ್ರಾಮದ ಯೋಧ ಹಣಮಂತ ತಳವಾರ ಅವರ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು
‌ಸಚಿವ ಆರ್.ಬಿ. ತಿಮ್ಮಾಪುರ ಅವರು ಕಲಾದಗಿ ಸಮೀಪದ ಖಜ್ಜಿಡೋಣಿ ಗ್ರಾಮದ ಯೋಧ ಹಣಮಂತ ತಳವಾರ ಅವರ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು   

ಕಲಾದಗಿ: ಆ.3 ರಂದು ರಾಜಸ್ಥಾನದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಸಮೀಪದ ಖಜ್ಜಿಡೋಣಿ ಗ್ರಾಮದ ಯೋಧ ಹಣಮಂತ ಬಸಪ್ಪ ತಳವಾರ ಅವರ ಪಾರ್ಥಿವ ಶರೀರವನ್ನು ಭಾರತೀಯ ಸೇನೆಯ ವಾಹನದಲ್ಲಿ ಸೋಮವಾರ ಸ್ವಗ್ರಾಮಕ್ಕೆ ತರಲಾಯಿತು.

ಸಾವಿರಾರು ಮಂದಿ ‘ಅಮರ್ ರ ಹೇ ಹಣಮಂತ’, ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದರು.

ಗ್ರಾಮದ ತಾಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ.ತಿಮ್ಮಾಪುರ, ಜಿಲ್ಲಾಧಿಕಾರಿ ಜಾನಕಿ.ಕೆ.ಎಂ, ಜಿಲ್ಲಾ ಪಂಚಾಯತಿ ಸಿಇಒ ಶಶಿಧರ ಕುರೇರ, ತಹಶೀಲ್ದಾರ್ ಅಮರೇಶ ಪಮ್ಮಾರ್,  ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ADVERTISEMENT

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಯೋಧನ ಪತ್ನಿ ಹಾಗೂ ಸಂಬಂಧಿಕರ ಆಕ್ರಂದನ ಕಂಡು ಜನರ ಕಣ್ಣಾಲೆಗಳು ತುಂಬಿದವು. ವೀರಯೋಧನ ಕಳೆದುಕೊಂಡ ಗ್ರಾಮಸ್ಥರು ಕಂಬನಿ ಮಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.