ಕಲಾದಗಿ: ಸಮೀಪದ ತುಳಸಿಗೇರಿ ಗ್ರಾಮದ ಮಾರುತೇಶ್ವರ ಓಕುಳಿ ಅಂಗವಾಗಿ ಭಾನುವಾರ ದೇವಸ್ಥಾನದ ಆವರಣದಲ್ಲಿ ಹರಿಸೇವೆ ಕಾರ್ಯಕ್ರಮ ಜರುಗಿತು.
ಊರಿನ ಮಹಿಳೆಯರು ಪುರುಷರು ಕೂಡಿ ಬರೋಬ್ಬರಿ 15 ಕ್ವಿಂಟಲ್ ಬೇಳೆ ಹಿಟ್ಟಿನ ಕರಿಗಡಬು ತಯಾರಿಸಿದರು. ಮಾರುತೇಶ್ವರನಿಗೆ 5 ವಿಶೇಷ ಕಡುಬುಗಳ ನೈವೇದ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಾವಿರಾರು ಭಕ್ತರು ಕಡುಬಿನ (ಕರ್ಚಿಕಾಯಿ) ಪ್ರಸಾದ ಸವಿದರು.
ಸೋಮವಾರ ಮಾರುತೇಶ್ವರ ಓಕುಳಿ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಾನಗಳು ಹಾಗೂ ಓಕುಳಿ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.