ಕೆರೂರ: ‘ಸರ್ವ ಶ್ರೇಷ್ಠ ಭಾರತಕ್ಕಾಗಿ ಮೊತ್ತೊಮ್ಮೆ ಮೋದಿ ಅವರು ಪ್ರಧಾನಮಂತ್ರಿಯಾಗಬೇಕು’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಗುರುವಾರ ನಮೋ ಬ್ರೀಗೆಡ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಂ.ಪಿ ಅಭ್ಯರ್ಥಿ ಯಾರೇ ಇರಲಿ ನಮ್ಮ ಗುರಿ ಮಾತ್ರ ಮೋದಿ ಅವರನ್ನು ಗೆಲ್ಲಿಸುವುದು, ಅಟಲ್ ಬಿಹಾರಿ ವಾಜಿಪೆ ಅವರಿಗೆ ಮಾಡಿದ ಮೋಸ ಮೋದಿ ಅವರಿಗೆ ಆಗದಂತೆ ಜಾಗೃತರಾಗಿರೋಣ’ ಎಂದು ಹೇಳಿದರು.
ಕೆರೂರ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಿತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಪ.ಪಂ ಸದಸ್ಯರಾದ ವಿಜಯಕುಮಾರ ಐಹೊಳ್ಳಿ, ಪ್ರಮೋದ ಪೂಜಾರ, ಪರಶುರಾಮ ಮಲ್ಲಾಡದ , ಶಿವಪ್ಪ ಹೆಬ್ಬಳ್ಳಿ, ಬಸವರಾಜ ಬೊಂಬ್ಲೆ, ಗುಂಡಣ್ಣ ಬೋರಣ್ಣವರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.