ADVERTISEMENT

‘ನಿವೇಶನ ವಾಪಸ್: ಹೋರಾಟದ ಸಂಕೇತ –ಉಮಾಶ್ರೀ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 16:17 IST
Last Updated 2 ಅಕ್ಟೋಬರ್ 2024, 16:17 IST
ಉಮಾಶ್ರೀ
ಉಮಾಶ್ರೀ   

ಮಹಾಲಿಂಗಪುರ: ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ನಿವೇಶನ ವಾಪಸ್‌ ಕೊಟ್ಟಿದ್ದಾರೆಂದರೆ, ಅವರು ಹೋರಾಟಕ್ಕೆ ಸಿದ್ಧರಾಗಿದ್ದಾರೆ ಎಂದರ್ಥ. ‘ಮುಡಾ’ ದಲ್ಲಿ ತಪ್ಪುಗಳು ಆಗಿವೆ. ಅದರ ಬಗ್ಗೆ ಸಮಗ್ರ ತನಿಖೆಯಾಗಲಿ’ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.

‘ಕುಟುಂಬ ಮತ್ತು ರಾಜಕೀಯ ಎರಡೂ ಬೇರೆಯೆಂದೇ ನಂಬಿ, ಬದುಕುತ್ತಿರುವ ಸಿದ್ದರಾಮಯ್ಯ ಅವರನ್ನು ಕುಟುಂಬ ಸಹಿತ ಪ್ರಕರಣಕ್ಕೆ ಎಳೆದು ತರಲಾಗಿದೆ. ಇದು ಒಬ್ಬ ಜನನಾಯಕ ಮತ್ತು ಒಂದು ರಾಜಕೀಯ ಪಕ್ಷವನ್ನು ಮುಗಿಸುವ ಷಡ್ಯಂತ್ರ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ತವರುಮನೆಯಿಂದ ಕೊಟ್ಟ ಆಸ್ತಿಯನ್ನು ಸಿದ್ದರಾಮಯ್ಯ ಪತ್ನಿ ಪಡೆದಿದ್ದು ತಪ್ಪೇ? ಸಿದ್ದರಾಮಯ್ಯ ಅವರ ಪತ್ನಿ ಮುಗ್ಧೆ. ಅವರಿಗೆ ನಿವೇಶನ ಪ್ರಾಮಾಣಿಕವಾಗಿ ಬಂದಿದೆ. ಅನ್ಯಾಯವಾಗಿ ಅವರ ಹೆಸರನ್ನು ರಾಜಕೀಯವಾಗಿ ಬಳಸಲಾಗುತ್ತಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.