ADVERTISEMENT

ಬೆದರಿಕೆ ಹಾಕಿದ್ದರಿಂದ ಹಣ ಕೊಟ್ಟೆ: ಪರಮಾರೂಢ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 22:57 IST
Last Updated 29 ಸೆಪ್ಟೆಂಬರ್ 2024, 22:57 IST
ಹಣ–ಸಾಂದರ್ಭಿಕ ಚಿತ್ರ
ಹಣ–ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ‘ಹಣ ನೀಡದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಹೆದರಿ ಹಣ ನೀಡಿದೆ’ ಎಂದು ತಾಲ್ಲೂಕಿನ ಗದ್ದನಕೇರಿ ಗ್ರಾಮ ಬಳಿಯ ರಾಮಾರೂಢ ಮಠದ ಪರಮಹಂಸ ಪರಮಾರೂಢ ಸ್ವಾಮೀಜಿ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕಾಶ ಎನ್ನುವ ವ್ಯಕ್ತಿ ಡಿವೈಎಸ್‌ಪಿ, ಎಡಿಜಿಪಿ ಹೆಸರಿನಲ್ಲಿ ಕರೆ ಮಾಡಿ ಜಾಮೀನುರಹಿತ ವಾರಂಟ್‌ ಆಗಿದೆ. ಹಣ ಕೊಡದಿದ್ದರೆ, ಸಂಜೆಯ ವೇಳೆಗೆ ಕೊಲೆ ಮಾಡುವುದಾಗಿ ಹೇಳಿದ್ದರಿಂದ ಪ್ರಾಣ ಭಯದಿಂದ ಹಣ ಕೊಟ್ಟೆ’ ಎಂದು ಭಾವುಕರಾಗಿ ಹೇಳಿದರು.

‘ಭಕ್ತರಿಗೆ ಹಣ ಕೇಳಿದಾಗ, ಅವರು ಮಠಕ್ಕೆ ಹಣ ತಂದುಕೊಟ್ಟರು. ಅಪರಾಧ ಮಾಡಿದ್ದರೆ ಭಕ್ತರು ಹಣ ನೀಡುತ್ತಿದ್ದರೇ? ಯಾವುದೇ ರೀತಿಯ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದನ್ನು ಸಾಬೀತು ಮಾಡಿದರೆ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ. ಭಕ್ತರು ಎದೆಗುಂದ ಬೇಕಿಲ್ಲ’ ಎಂದರು. ‌ ಪೊಲೀಸರ ಹೆಸರಿನಲ್ಲಿ ಬೆದರಿಸಿದ್ದರಿಂದ ಸ್ವಾಮೀಜಿ, ಆರೋಪಿಗಳಿಗೆ ₹1 ಕೋಟಿ ನೀಡಿದ್ದು, ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.