ADVERTISEMENT

ರಬಕವಿ ಬನಹಟ್ಟಿ | ಐಸ್‌ಕ್ರೀಮ್‌ ಪಾರ್ಲರ್‌ಗೆ ಲಾಕ್‌ಡೌನ್‌ ಬಿಸಿ

ವಿಶ್ವಜ ಕಾಡದೇವರ
Published 22 ಮೇ 2020, 19:45 IST
Last Updated 22 ಮೇ 2020, 19:45 IST
ಬನಹಟ್ಟಿಯ ಬಸ್‌ನಿಲ್ದಾಣದ ಎದುರಿನ ಐಸ್‌ಕ್ರೀಮ್‌ ಪಾರ್ಲರ್‌ನಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿ ನಿಂತಿರುವ ಮಾಲೀಕ
ಬನಹಟ್ಟಿಯ ಬಸ್‌ನಿಲ್ದಾಣದ ಎದುರಿನ ಐಸ್‌ಕ್ರೀಮ್‌ ಪಾರ್ಲರ್‌ನಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿ ನಿಂತಿರುವ ಮಾಲೀಕ   

ರಬಕವಿ ಬನಹಟ್ಟಿ: ಮೇ ತಿಂಗಳ ಬಿರು ಬೇಸಿಗೆಯಲ್ಲಿ ಅವಳಿ ನಗರದ ಜನರ ದಾಹ ನೀಗಿಸುತ್ತಿದ್ದ ಹತ್ತಾರು ಐಸ್‌ ಕ್ರಿಮ್‌ ಪಾರ್ಲರ್‌ಗಳು ಕೋವಿಡ್‌–19 ಲಾಕ್‌ಡೌನ್ ಪರಿಣಾಮ ವ್ಯಾಪರವಿಲ್ಲದೇ ಸಂಕಷ್ಟಕ್ಕೆ ಸಿಲುಕಿವೆ.

ಪ್ರತಿ ವರ್ಷ ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳು ಐಸ್‌ ಕ್ರಿಮ್‌ ಪಾರ್ಲರ್‌ಗಳಿಗೆ ಸುಗ್ಗಿಯ ಕಾಲ. ಆದರೆ ಈ ಬಾರಿ ಕೋವಿಡ್‌ನಿಂದಾಗಿ ಸಂಪೂರ್ಣವಾಗಿ ಉದ್ಯೋಗವೇ ಬಂದ್ ಆಗಿದೆ. ಐಸ್‌ ಕ್ರಿಮ್‌ ಪಾರ್ಲರ್‌ ಅವಲಂಬಿಸಿ ಜೀವನ ಸಾಗಿಸುತ್ತಿರುವ ಕುಟುಂಬಗಳು ತೊಂದರೆಯಲ್ಲಿವೆ.

ಬನಹಟ್ಟಿಯ ಅಜಯ ಆಸಂಗಿ ಬೇಸಿಗೆಯಲ್ಲಿ ನಿತ್ಯ ಅಂದಾಜು 100 ಲೀಟರ್‌ ಹಾಲಿನ ಐಸ್‌ ಕ್ರಿಮ್‌, ಜ್ಯೂಸ್‌, ಮಿಲ್ಕ್‌ ಶೇಕ್, ಲಸ್ಸಿ ಹೀಗೆ ಒಟ್ಟು 80ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾಡುತ್ತಿದ್ದರು. ಪ್ರತಿ ನಿತ್ಯ ₹15000 ವ್ಯಾಪಾರ ಆಗುತ್ತಿತ್ತು. ಐಸ್‌ಕ್ರೀಂ,‌ ಜ್ಯೂಸ್‌ ತಯಾರಿಕೆಗೆ ಹತ್ತಾರು ಲಕ್ಷ ಮೌಲ್ಯದ ಯಂತ್ರಗಳನ್ನು ತಂದಿದ್ದಾರೆ. ಆದರೆ ಅವೀಗ ಹಾಗೇ ಬಿದ್ದಿವೆ.

ADVERTISEMENT

ಈ ಬಾರಿಯ ಬೇಸಿಗೆಗೆ ₹2 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಆಸಂಗಿ ಬೆಳಗಾವಿ ಮತ್ತು ಕೊಲ್ಲಾಪುರದಿಂದ ತಂದಿದ್ದರು. ಆದರೆ ಈಗ ಎಲ್ಲವೂ ವ್ಯರ್ಥವಾಗುತ್ತಿವೆ ಎನ್ನುತ್ತಾರೆ. ಈಗ ಪಾರ್ಸಲ್‌ ಸೇವೆ ಆರಂಭಸಿದ್ದೇವೆ. ಆದರೆ ಗ್ರಾಹಕರು ಬರುತ್ತಿಲ್ಲ ಎಂದು ಹೇಳುತ್ತಾರೆ. ’ಇನ್ನು ಮಳೆಗಾಲ ಅರಂಭವಾದರೆ ಐಸ್‌ಕ್ರೀಮ್‌ಗೆ‌ ಬೇಡಿಕೆ ಇಲ್ಲವಾಗುತ್ತದೆ. ಬೇಸಿಗೆಯಲ್ಲಿ ತಂಪು ಪಾನೀಯ ಮಾರಾಟವಾಗುತ್ತಿದ್ದವು. ಆದರೆ ಅವುಗಳನ್ನು ಯಾರೂ ಕೇಳುತ್ತಿಲ್ಲ‘ ಎನ್ನುತ್ತಾರೆ ರಬಕವಿಯ ಬಸವರಾಜ ಅಮ್ಮಣಗಿಮಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.