ಮಹಾಲಿಂಗಪುರ: ಪಟ್ಟಣದ ಮಹಾಲಿಂಗೇಶ್ವರ ಜಾತ್ರೆಯನ್ನು ಸೆಪ್ಟೆಂಬರ್ 17ರಿಂದ 20ರವರೆಗೆ ನಡೆಸಲು ಗುರುವಾರ ಮಹಾಲಿಂಗೇಶ್ವರ ಮಠದಲ್ಲಿ ನಡೆದ ಜಾತ್ರಾ ಕಮಿಟಿಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸೆ.17ರಂದು ಚನ್ನಗಿರಿ ಪರ್ವತದಲ್ಲಿ ಜಾತ್ರಾ ಜಟೋತ್ಸವ, 18ರಂದು ಅನಂತನ ಹುಣ್ಣಿಮೆಯ ದಿನ ತುಂಬಿದ ತೇರು (ರಥೋತ್ಸವ), 19ರಂದು ಮರುತೇರು, 20ರಂದು ಗೋಕಾಕ ರಸ್ತೆಯ ಗಾಂಧಿ ಮೈದಾನದಲ್ಲಿರುವ ಕುಸ್ತಿ ಕಣದಲ್ಲಿ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯ ಆಯೋಜಿಸುವುದಾಗಿ ಮುಖಂಡರು ತಿಳಿಸಿದರು.
ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಕೃಷ್ಣಗೌಡ ಪಾಟೀಲ, ಆಚಾರ್ಯ ಅನಿಲ ಜೋಶಿ, ಮಹಾಲಿಂಗಪ್ಪ ತಟ್ಟಿಮನಿ, ಬಸವರಾಜ ಪಾಶ್ಚಾಪುರ, ಲಕ್ಕಪ್ಪ ಚಮಕೇರಿ, ಮಲ್ಲಿಕಾರ್ಜುನ ಕುಳ್ಳೊಳ್ಳಿ, ಮಹಾಲಿಂಗಪ್ಪ ಕೋಳಿಗುಡ್ಡ, ಗುರುಪಾದಯ್ಯ ಛಟ್ಟಿಮಠ, ಚಂದ್ರು ಗೊಂದಿ, ಈರಪ್ಪ ದಿನ್ನಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.