ADVERTISEMENT

ಮಹಾಲಿಂಗಪುರ: ವಿಠ್ಠಲ ರುಕ್ಮಿಣಿ ಜಾತ್ರೆ ನ.11ರಿಂದ 

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:45 IST
Last Updated 18 ಅಕ್ಟೋಬರ್ 2024, 15:45 IST
ಮಹಾಲಿಂಗಪುರದ ವಿಠ್ಠಲ ರುಕ್ಮಿಣಿ ದೇವಸ್ಥಾನ ಜಾತ್ರೋತ್ಸವದ ಭಿತ್ತಿಪತ್ರವನ್ನು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಬಿಡುಗಡೆಗೊಳಿಸಿದರು 
ಮಹಾಲಿಂಗಪುರದ ವಿಠ್ಠಲ ರುಕ್ಮಿಣಿ ದೇವಸ್ಥಾನ ಜಾತ್ರೋತ್ಸವದ ಭಿತ್ತಿಪತ್ರವನ್ನು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಬಿಡುಗಡೆಗೊಳಿಸಿದರು    

ಮಹಾಲಿಂಗಪುರ: ಸ್ಥಳೀಯ ಬುದ್ನಿ ಪಿಡಿ ಬಡಾವಣೆಯ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನವೆಂಬರ್‌ 11ರಿಂದ 16ರವರೆಗೆ ನಡೆಯುವ ಹರಿನಾಮ ಸಪ್ತಾಹ ಹಾಗೂ ಜಾತ್ರೋತ್ಸವದ ಭಿತ್ತಿಪತ್ರವನ್ನು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಶುಕ್ರವಾರ ಬಿಡುಗಡೆಗೊಳಿಸಿದರು.

ಜಾತ್ರಾ ಕಮಿಟಿ ಮುಖ್ಯಸ್ಥ ಕೃಷ್ಣಗೌಡ ಪಾಟೀಲ ಮಾತನಾಡಿ, ‘ವಿಠ್ಠಲ ರುಕ್ಮಿಣಿ ದೇವಸ್ಥಾನದ ಜಾತ್ರೋತ್ಸವ ಮತ್ತು ಅಖಂಡ ಹರಿನಾಮ ಸಪ್ತಾಹ ಫಂಡರಾಪುರದ ಶಿವುರಕೆರೆ ಶಾಖೆಯ ಕೃಷ್ಣ ಮಹಾರಾಜ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ. 11ರಂದು ಸಂಜೆ 5ಕ್ಕೆ ಪೋತಿ ಸ್ಥಾಪನೆ, ರಾತ್ರಿ 8 ರಿಂದ ಭಜನೆ, 12ರಿಂದ 14ರವರೆಗೆ ನಿತ್ಯ ಬೆಳಿಗ್ಗೆ 5ರಿಂದ 6ಗಂಟೆವರೆಗೆ ಕಾಕಡಾರತಿ, 7 ಗಂಟೆಯಿಂದ ಪ್ರವಚನ, 1 ಗಂಟೆಯಿಂದ ಭಜನೆ, ಕೀರ್ತನೆ, ಸಂಜೆ 4ರಿಂದ 6 ಗಂಟೆವರೆಗೆ ಪರಿಪಾಠ, 7ರಿಂದ 9ಗಂಟೆವರೆಗೆ ಕೀರ್ತನೆ, 9ಗಂಟೆಯಿಂದ ಜಾಗರಣೆ ನಡೆಯಲಿದೆ’ ಎಂದರು.

‘15ರಂದು ಬೆಳಿಗ್ಗೆ 5ರಿಂದ 8ಗಂಟೆವರೆಗೆ ಕಾಕಡಾರತಿ, ಶ್ರೀಹರಿ ವಿಠ್ಠಲ ಸೋಹಳಾ ದಿಂಡಿ ನಗರ ಪ್ರದಕ್ಷಿಣೆ, ಭಾರುಡ, ಮಹಾಪ್ರಸಾದ, ಮಧ್ಯಾಹ್ನ 12 ಗಂಟೆಗೆ  ‘ಹಳ್ಳಿಯಿಂದ ದಿಲ್ಲಿವರೆಗೆ’ ನಾಟಕ ಪ್ರದರ್ಶನ ಹಾಗೂ ಸಂಜೆ 5 ಗಂಟೆಗೆ ಮಹಾರಥೋತ್ಸವ, 16ರಂದು ಸಂಜೆ 5 ಗಂಟೆಗೆ ಕಳಸ ಇಳಿಸಿ ಮಹಾಪ್ರಸಾದದೊಂದಿಗೆ ಉತ್ಸವ ಮುಕ್ತಾಯವಾಗುವುದು’ ಎಂದು ತಿಳಿಸಿದರು.

ADVERTISEMENT

ಶಂಕರಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ನಾರಾಯಣಗೌಡ ಪಾಟೀಲ, ವಿಠ್ಠಲಗೌಡ ಪಾಟೀಲ, ಮಹಾಲಿಂಗಗೌಡ ಪಾಟೀಲ, ಶ್ರೀನಿವಾಸಗೌಡ ಮಾಲಬಸರಿ, ಮಲ್ಲಪ್ಪ ಅಂಬಣ್ಣಗೋಳ, ಕುಮಾರ ಪವಾರ, ರಾಜು ಮುದಕಪ್ಪಗೋಳ, ಸದಾಶಿವ ಶೇಗುಣಸಿ, ಮಲ್ಲಿಕಾರ್ಜುನ ಸಂಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.