ADVERTISEMENT

ಏ.8ರಿಂದ ಮಂಗಳಾದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 13:43 IST
Last Updated 7 ಏಪ್ರಿಲ್ 2024, 13:43 IST
ಮಂಗಳಾದೇವಿ 
ಮಂಗಳಾದೇವಿ    

ಗುಳೇದಗುಡ್ಡ: ತಾಲ್ಲೂಕಿನ ಮಂಗಳಗುಡ್ಡ ಗ್ರಾಮದ ಶ್ರೀ ಮಂಗಳಾದೇವಿ ಜಾತ್ರಾ ಮಹೋತ್ಸವ ಏ.8ರಿಂದ ಪ್ರಾರಂಭವಾಗಲಿದೆ ಎಂದು ಅರ್ಚಕ ನಿಂಗರಾಜ ಪೂಜಾರಿ ತಿಳಿಸಿದರು.

ಭಾನುವಾರ ಸೋಮನಾಥವ ದೇವರ ಆರಾಧನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಯುಗಾದಿ ಅಮಾವಾಸೆ ಮತ್ತು ಪಾಡ್ಯ ದಿನದಂದು ದೇವಿಗೆ ವಿಶೇಷ ಪೂಜೆ ಮತ್ತು ಪ್ರಸಾದ ನೆರವೇರಲಿದೆ.

ಏ.16 ರಂದು ಮಂಗಳಗುಡ್ಡ, ಕಟಾಪೂರ, ಪಟ್ಟದಕಲ್, ಬಾಚಿನಗುಡ್ಡ, ಬೂದನಗಡ, ಸಬ್ಬಲಹುಣಸಿ, ಅಮಿನಗಡ, ಚಿಮ್ಮಲಗಿ ಮುಂತಾದ ಗ್ರಾಮಗಳ ಭಕ್ತರ ಕಳಸ, ಡೊಳ್ಳಿನ ವಾದ್ಯಗಳೊಂದಿಗೆ ಗರುಡ ಪಟ ಕಟ್ಟುವುದು, ಸಂಜೆ ಹುಚ್ಚಯ್ಯನ ಮಹೋತ್ಸವ ಜರುಗುವುದು.

ADVERTISEMENT

ಏ.17ರ ಬೆಳಿಗ್ಗೆ ರಘುಕುಮಾರ ದೇಸಾಯಿ ಮತ್ತು ಗೌಡರ ಬಂಧುಗಳಿಂದ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಂದ ದೇವಿಗೆ ವಸ್ತ್ರಾಭರಣ ಮತ್ತು ಉಡಿ ತುಂಬುವುದು. ನಂದಿಕೇಶ್ವರ ಗ್ರಾಮಸ್ಥರಿಂದ ದೇವಿಗೆ ವಾದ್ಯ ಸಂಗೀತ ಮೇಳದೊಂದಿಗೆ ಹೂಮಾಲೆ ಮತ್ತು ರಥೋತ್ಸವಕ್ಕೆ ದೊಡ್ಡ ಹೂವಿನ ಹಾರ ಸೇವೆ ಜರಗುವುದು. ಕಳಸದ ಮೆರವಣಿಗೆ ನಂತರ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಸಾನ್ನಿಧ್ಯದಲ್ಲಿ ಸಂಜೆ 5.35 ಗಂಟೆಗೆ ಜ್ಯೋತಿ ಬೆಳಗಿಸುವ ಮೂಲಕ ಮಂಗಳಾದೇವಿ ಮಹಾ ರಥೋತ್ಸವಕ್ಕೆ ಚಾಲನೆ ನೀಡುವರು.

ಏ.18 ರಂದು ಪ್ರಸಿದ್ದ ಪೈಲ್ವಾನರಿಂದ ಕುಸ್ತಿಗಳು, ರಾತ್ರಿ ಮನರಂಜನಾ ಮತ್ತು ನಾಟಕೋತ್ಸವ ಜರುಗುತ್ತವೆ. ಏ.19ಕ್ಕೆ ತಳ್ಳಿಕೇರಿ ಗ್ರಾಮಸ್ಥರಿಂದ ದೇವಿಗೆ ಉಡಿ ತುಂಬುವುದು, ಏ.21ರಂದು ಬೆಳಿಗ್ಗೆ 10 ಗಂಟೆಗೆ ಕಳಸಾರೋಹನ ಕಾರ್ಯಕ್ರಮ ಜರುಗುವುದು. ಏ.25 ರಂದು ಸುತ್ತಮುತ್ತಲಿನ ಗ್ರಾಮಸ್ಥರು ಕಡೇವಾರ ಮಾಡುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.