ADVERTISEMENT

‘ಡಿಸಿಎಂ ಹುದ್ದೆ: ಅಧಿಕಾರ ಹಂಚಿಕೆ ಆದರೆ ಎಲ್ಲ ಸಮುದಾಯಕ್ಕೂ ಅವಕಾಶ’

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:26 IST
Last Updated 23 ಜೂನ್ 2024, 16:26 IST
ಸಚಿವ ಕೆ.ಎನ್.ರಾಜಣ್ಣ
ಸಚಿವ ಕೆ.ಎನ್.ರಾಜಣ್ಣ   

ಬಾಗಲಕೋಟೆ: ‘ನಾನು ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ. ವಿವಿಧ ಸಮುದಾಯಗಳ ಬೇಡಿಕೆಯಂತೆ ಇನ್ನಷ್ಟು ಜನರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಹೇಳುತ್ತಿದ್ದೇನೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಭಾನುವಾರ ಬಾಪೂಜಿ ಬ್ಯಾಂಕ್ ಪ್ರಧಾನ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಧಿಕಾರ ಹಂಚಿಕೆಯಾದರೆ ಎಲ್ಲ ಸಮುದಾಯಗಳಿಗೂ ಅವಕಾಶ ಸಿಗಲಿದೆ. ಪಕ್ಷದ ಮೇಲೆ ಪ್ರೀತಿ, ವಿಶ್ವಾಸ ಹೆಚ್ಚುತ್ತದೆ. ಆ ದೃಷ್ಟಿಯಿಂದ ಲಿಂಗಾಯತ, ಅಲ್ಪಸಂಖ್ಯಾತ, ಎಸ್‌ಸಿ, ಎಸ್ಟಿ ಸಮುದಾಯಗಳ ಒಬ್ಬೊಬ್ಬರನ್ನು ಡಿಸಿಎಂ ಮಾಡಬೇಕು. ಆ ದೃಷ್ಟಿಯಿಟ್ಟುಕೊಂಡು ಪ್ರತಿಪಾದನೆ ಮಾಡುತ್ತಿದ್ದೇನೆ’ ಎಂದರು.

ADVERTISEMENT

'ಹಿಂದೆ ಬಿಜೆಪಿ ಅವಕಾಶ ನೀಡಿತ್ತು. ಡಿಸಿಎಂ ಎಂದಾಕ್ಷಣ ಹೊಸದಾಗಿ ಏನು ಕೊಡಬೇಕಿಲ್ಲ. ಸಂಪುಟ ಸಚಿವರಿಗೆ ಇರುವ ಸೌಲಭ್ಯ ಮುಂದುವರಿಯುತ್ತದೆ. ಆದರೆ, ಎಲ್ಲ ವರ್ಗದವರಿಗೆ ಸರ್ಕಾರದಲ್ಲಿ ನಮಗೂ ಪ್ರಾತಿನಿಧ್ಯ ಸಿಕ್ಕಿದೆ ಎನ್ನುವ ಭಾವನೆ ಬರುತ್ತದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಅದಕ್ಕೆ ನಾವು ಬದ್ದರು‘ ಎಂದರು.

‘ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ರಾಜಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.