ADVERTISEMENT

ಎನ್‌ಎಸ್‌ಜಿ ಪಡೆಗೆ ಮುಧೋಳ ತಳಿ ನಾಯಿ!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 13:01 IST
Last Updated 14 ಡಿಸೆಂಬರ್ 2019, 13:01 IST
ಮುಧೋಳ ತಳಿ ನಾಯಿ
ಮುಧೋಳ ತಳಿ ನಾಯಿ   

ಬಾಗಲಕೋಟೆ: ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ದೇಶದಲ್ಲಿ ಅತಿ ಗಣ್ಯರಿಗೆ ಭದ್ರತೆಯ ಹೊಣೆ ಹೊತ್ತಿರುವ ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಪಡೆಯ ಶ್ವಾನ ದಳಕ್ಕೆ ನಮ್ಮ ಮುಧೋಳ ತಳಿ ನಾಯಿ ಆಯ್ಕೆಯಾಗಿದೆ.

ಈಗಾಗಲೇ ಮುಧೋಳ ತಳಿ ನಾಯಿಗಳು ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ಇಂಡೊ–ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ ಭಾಗವಾಗಿವೆ. ಇದೀಗ ದೇಶದ ಅತ್ಯುನ್ನತ ಭದ್ರತಾ ಸಂಸ್ಥೆಯ ಶ್ವಾನ ದಳದಲ್ಲೂ ಸ್ಥಾನ ದೊರೆತಂತಾಗಿದೆ.

’ನಾಲ್ಕು ಮರಿಗಳಿಗೆ ಬೇಡಿಕೆ ಬಂದಿದೆ. ಇನ್ನೊಂದು ವಾರದಲ್ಲಿ ದೆಹಲಿಯಿಂದ ಎನ್‌ಎಸ್‌ಜಿ ಪಡೆಯ ಹಿರಿಯ ಅಧಿಕಾರಿಗಳು ಇಲ್ಲಿಗೆ ಬಂದು ಕೊಂಡೊಯ್ಯಲಿದ್ದಾರೆ‘ ಎಂದು ಮುಧೋಳ ತಾಲ್ಲೂಕಿನ ತಿಮ್ಮಾಪುರದಲ್ಲಿರುವ ಮುಧೋಳ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಡಾ.ಮಹೇಶ ದೊಡಮನಿ ಹೇಳುತ್ತಾರೆ.

ADVERTISEMENT

ಸದ್ಯ ಕೇಂದ್ರದಲ್ಲಿ 45 ನಾಯಿ ಮರಿಗಳಿವೆ. ಅವುಗಳಲ್ಲಿ ಸೂಕ್ತ ಮರಿಗಳನ್ನು ಎನ್ಎಸ್‌ಜಿ ಅಧಿಕಾರಿಗಳೇ, ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.