ಮುಧೋಳ: ಕೇರಳದ ವಯನಾಡು ಭೀಕರ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿರುವ ಹಿನ್ನಲೆಯಲ್ಲಿ ನಗರದ ಅರಳಿಕಟ್ಟಿ ಫೌಂಡೇಷನ್‌ನಿಂದ ನೆರವು ನೀಡುತ್ತಿರುವುದು ಸ್ವಾಗತಾರ್ಯ ಕಾರ್ಯ ಎಂದು ಆರ್.ಎಂ.ಕೋಮಾರ ಹೇಳಿದರು.
ಅವರು ನಗರದ ಅರಳಿಕಟ್ಟಿ ಫೌಂಡೇಷನ್ ದಾನಿಗಳ ನೆರವಿನಿಂದ ಕಳುಹಿಸುತ್ತಿರುವ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಟಿ,ವಿ.ಅರಳಿಕಟ್ಟಿ ಮಾತನಾಡಿ, ಅಲ್ಲಿಯ ಜನತೆಗೆ ಬೇಕಾದ ಬಟ್ಟೆ, ಬೆಡ್‌ಶೀಟ್, ಬ್ಯಾಂಕೇಟ್, ಟವೆಲ್, ನೀರಿನ ಬಾಟಲ್‌ಗಳನ್ನು ಕಳುಹಿಸಲಾಗುತ್ತಿದೆ. ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿದ ನಗರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಮುಖಂಡರಾದ ಆರ್.ಎಚ್. ಚಿಕ್ಕೂರ, ವೆಂಕನಗೌಡ ನಾಡಗೌಡ, ಶ್ರೀಕಾಂತ ಕೋಲುರ, ರಾಚಣ್ಣ ಕಣಬೂರ, ಶಿವಾನಂದ ಪೂಜಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.