ADVERTISEMENT

ಲೋಕಾಪುರ | ಮಹಿಳೆ ಕೊಲೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 15:29 IST
Last Updated 2 ಏಪ್ರಿಲ್ 2024, 15:29 IST

ಲೋಕಾಪುರ: ಜಗಳ ಬೀಡಿಸಲು ಹೋಗಿದ್ದ ಮಹಿಳೆಯನ್ನೇ ಕೊಲೆ ಮಾಡಿದ ಘಟನೆ ಸಮೀಪದ ನಿಂಗಾಪೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.

ತಾಯವ್ವ ಲಾಡಪ್ಪ ಸಾಲಮಂಟಪಿ (60) ಮೃತಪಟ್ಟ ಮಹಿಳೆ. ಪ್ರಕಾಶ ಭೀಮಪ್ಪ ಮಾದಾರ, ಯಮನಪ್ಪ ಭೀಮಪ್ಪ ಮಾದಾರ, ಭೀಮಪ್ಪ ಮಾದಾರ ಆರೋಪಿಗಳು.

ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ವಿಠಲ ಸಾಲಮಂಟಪಿ ಅವರ ಮನೆಗೆ ಮಾತುಕತೆ ನಡೆಸಲು ಆರೋಪಿಗಳು ಹೋಗಿದ್ದರು. ಈ ವೇಳೆ ಆರಂಭವಾದ ಜಗಳ ಬಿಡಿಸಲು ಮುಂದಾದ ತಾಯವ್ವ ಅವರನ್ನು ಎದೆಗೆ ಗುದ್ದಿ ಕೊಲೆ ಮಾಡಿದ್ದಾಗಿ ದೇವರಾಜ ವಿಠಲ ಸಾಲಮಂಟಪಿ ಅವರು ದೂರು ದಾಖಲಿಸಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.