ADVERTISEMENT

ವೈಯಕ್ತಿಕ ಮಾತು ಬೇಡ: ಸ್ವಾಮೀಜಿಗೆ ನಿರಾಣಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 16:20 IST
Last Updated 11 ಏಪ್ರಿಲ್ 2024, 16:20 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬಾಗಲಕೋಟೆ: ‘ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದರೆ, ನಿಮ್ಮವು ನೂರಾರು ವಿಷಯ ನನ್ನಲ್ಲಿವೆ. ಸಮಾಜದವರು ಮಾತನಾಡಬಾರದು ಎಂದು ಸುಮ್ಮನಿರುವೆ. ಅದನ್ನೇ ದೌರ್ಬಲ್ಯ ಎಂದುಕೊಳ್ಳಬೇಡಿ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಕಲಾದಗಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಗದೀಶ ಶೆಟ್ಟರ್, ಮೃಣಾಲ್‌ ಹೆಬ್ಬಾಳಕರ ಇಬ್ಬರೂ ಒಂದೇ ಸಮಾಜದವರು. ನೀವೇಕೆ ಅಲ್ಲಿ ಪ್ರಚಾರ ಮಾಡುತ್ತೀರಿ? ನಿಮ್ಮ ಸಮಾಜದವರು ಇದ್ದಲ್ಲಿ ಪ್ರಚಾರ ಮಾಡಿ. ಸುಳ್ಳು ಹೇಳಿ ಬೆಂಬಲಿಸುವುದು ಯಾವ ನ್ಯಾಯ’ ಎಂದು ‍ಪ್ರಶ್ನಿಸಿದರು.

‘ಪಕ್ಷದ ಪರ ಪ್ರಚಾರ ಮಾಡುವುದನ್ನು ಬಿಟ್ಟು ಸಮಾಜಕ್ಕೆ ಮೀಸಲಾತಿ ಕೊಡಿಸುವತ್ತ ಗಮನ ಹರಿಸಿ. ಬಿಜೆಪಿ ಸರ್ಕಾರ ಇದ್ದಾಗ ಜಾತಿ ಕಾಲಂನಲ್ಲಿ ಸೇರಿಸಲಾಗಿದೆ. 2ಡಿ ನೀಡಲಾಗಿದೆ. ಆಗ ಕಾಂಗ್ರೆಸ್‌ ಏಜೆಂಟ್‌ರಾಗಿ ಕೆಲಸ ಮಾಡಿದ ನೀವು ಎಷ್ಟು ಪ್ರತಿಭಟನೆ ಮಾಡಿದ್ದೀರಿ? ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ 2ಎ ಮೀಸಲಾತಿ ನೀಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿದ್ದರು. ಸರ್ಕಾರ ಬಂದು 6 ತಿಂಗಳಾದರೂ ಕ್ರಮ ಕೈಗೊಂಡಿಲ್ಲ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.