ADVERTISEMENT

ವೈದ್ಯಕೀಯ ವೃತ್ತಿಗೆ ನಿರಂತರ ಕಲಿಕೆ ಅಗತ್ಯ: ನರರೋಗ ತಜ್ಞ ಅನಿಲ್ ಅಭಿಮತ

ನ್ಯುರೊ-ಅಕ್ಸಿಸ್ ವೈದ್ಯಕೀಯ ಸಮ್ಮೇಳನ: ನರರೋಗ ತಜ್ಞ ಅನಿಲ್ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:52 IST
Last Updated 16 ನವೆಂಬರ್ 2024, 13:52 IST
ಬಾಗಲಕೋಟೆಯ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ನ್ಯುರೊ-ಅಕ್ಸಿಸ್ 2024’ ವೈದ್ಯಕೀಯ ಸಮ್ಮೇಳನವನ್ನು ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯ ನರರೋಗ ತಜ್ಞ ಅನಿಲ್ ರಾಮಕೃಷ್ಣ ಉದ್ಘಾಟಿಸಿದರು
ಬಾಗಲಕೋಟೆಯ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ನ್ಯುರೊ-ಅಕ್ಸಿಸ್ 2024’ ವೈದ್ಯಕೀಯ ಸಮ್ಮೇಳನವನ್ನು ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯ ನರರೋಗ ತಜ್ಞ ಅನಿಲ್ ರಾಮಕೃಷ್ಣ ಉದ್ಘಾಟಿಸಿದರು   

ಬಾಗಲಕೋಟೆ: ‘ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಿಷ್ಕಾರಗಳಾಗುತ್ತಿದ್ದು ಈ ವೃತ್ತಿಯಲ್ಲಿ ಪರಿಣತಿ ಸಾಧಿಸಲು ವೈದ್ಯರಲ್ಲಿ ಅನ್ವೇಷಣಾ ಮತ್ತು ನಿರಂತರ ಕಲಿಕಾ ಮನೋಭಾವ ಅಗತ್ಯ’ ಎಂದು ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯ ನರರೋಗ ತಜ್ಞ ಅನಿಲ್ ರಾಮಕೃಷ್ಣ ಹೇಳಿದರು.

ಬಿ.ವಿ.ವಿ. ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಅಖಿಲ ಭಾರತೀಯ ವೈದ್ಯರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ನ್ಯುರೊ-ಅಕ್ಸಿಸ್ 2024’ ವೈದ್ಯಕೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ರೋಗಿಗಳ ಚಿಕಿತ್ಸೆಯ ದೃಷ್ಟಿಯಿಂದ ವೈದ್ಯರು ಪರಿಣತಿ ಹೊಂದುವುದು ಅಗತ್ಯವಾಗಿದೆ. ರೋಗಪತ್ತೆ ಮತ್ತು ಚಿಕಿತ್ಸೆಯ ಕಾರ್ಯಕ್ಕೆ ಆಧುನಿಕತೆಯ ಸ್ಪರ್ಷ ನೀಡಬೇಕು’ ಎಂದರು.

‘ಸಧ್ಯದ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ, ಹೊಸ ಅವಿಷ್ಕಾರಗಳಿಗನುಗುಣವಾಗಿ ಕಾರ್ಯ ನಿರ್ವಹಿಸಲು ಅಗತ್ಯವಾದ ಜ್ಞಾನ ಪಡೆಯಲು ಇಂತಹ ಸಮ್ಮೇಳನಗಳು ಹಾಗೂ ನಿರಂತರ ಶಿಕ್ಷಣದಂತಹ ಕಾರ್ಯಕ್ರಮಗಳು ನೆರವಾಗುತ್ತಿವೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಸಿ.ಚರಂತಿಮಠ ಮಾತನಾಡಿ, ‘ಸಮಾಜದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಿದೆ. ರೋಗಿಗಳ ರೋಗಪತ್ತೆ ಮತ್ತು ಚಿಕಿತ್ಸಾ ಸಂದರ್ಭ ವೈದ್ಯರಿಗೆ ಕೆಲಸದಲ್ಲಿ ಬದ್ಧತೆ ಇರಲಿ. ಸಮ್ಮೇಳನದಲ್ಲಿನ ಚರ್ಚೆ ಮತ್ತು ಸಂವಾದ ಹೊಸ ವಿಷಯಗಳ ಅವಿಷ್ಕಾರಕ್ಕೆ ಕಾರಣವಾಗಲಿ’ ಎಂದು ಹೇಳಿದರು.

ವಿವಿಧ ರಾಜ್ಯಗಳ ಮೆಡಿಕಲ್ ಕಾಲೇಜುಗಳ 200ಕ್ಕೂ ಹೆಚ್ಚು ವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. 

ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಸಮ್ಮೇಳನದ ಸಂಘಟನಾ ಕಾರ್ಯಾಧ್ಯಕ್ಷ ಡಾ.ಗೋಪಾಲ ಬಜಾಜ್, ಸಂಘಟನಾ ಕಾರ್ಯದರ್ಶಿ ಡಾ.ಕೃತಿಕಾ ಮೊರಪ್ಪನವರ, ಡಾ.ದೇವರಡ್ಡಿ ನಾವಳ್ಳಿ ಮತ್ತು ಡಾ.ಶಿವಕುಮಾರ ಮಾಸರಡ್ಡಿ ಇದ್ದರು.

ತಂತ್ರಜ್ಞಾನ ಅಳವಡಿಸಿಕೊಳ್ಳಿ ಕಲಿಕೆ ನಿರಂತರವಾಗಿರಲಿ 200ಕ್ಕೂ ಹೆಚ್ಚು ವೈದ್ಯರು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.