ತೇರದಾಳ: ದೀಪಾವಳಿ ಹಬ್ಬಕ್ಕೆ ಮಾರಾಟ ಮಾಡುವ ಪಟಾಕಿಗಳು ಹಸಿರು ಪಟಾಕಿ ಆಗಿರಬೇಕು. ಹಾಗೂ ಜಿಲ್ಲಾಧಿಕಾರಿ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಟಾಕಿ ಅಂಗಡಿಕಾರರಿಗೆ ತೇರದಾಳ ಪಿಎಸ್ಐ ಅಪ್ಪಣ್ಣ ಐಗಳಿ ಎಚ್ಚರಿಕೆ ನೀಡಿದರು.
ಇಲ್ಲಿನ ಪಟಾಕಿ ಅಂಗಡಿ ಹಾಗೂ ಗೋದಾಮುಗಳಿಗೆ ಶನಿವಾರ ಭೇಟಿ ನೀಡಿ ಪಟಾಕಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲಾಧಿಕಾರಿ ಪಟಾಕಿ ವ್ಯಾಪಾರಸ್ಥರ ಸಭೆ ನಡೆಸಿ ಹಲವು ಸಲಹೆ ಸೂಚನೆಯ ಜತೆಗೆ ಮಾರ್ಗಸೂಚಿ ಆದೇಶ ನೀಡಿದ್ದಾರೆ. ಆದ್ದರಿಂದ ಹಸಿರು ಪಟಾಕಿ ಹೊರತು ಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಜನ ವಸತಿ ಪ್ರದೇಶಗಳಲ್ಲಿ ಪಟಾಕಿ ಹಚ್ಚಲು ನಿರ್ಬಂಧ ಹೇರಲಾಗಿದೆ. ಯಾವುದೇ ಅನಾಹುತಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.
ರಕ್ಷಕ ಸಿಬ್ಬಂದಿ ನಾಗರಾಜ ಕಾಂಬಳೆ, ವಿವೇಕ ಸುವರ್ಣಖಂಡಿ, ಪಟಾಕಿ ವ್ಯಾಪಾರಸ್ಥ ಶ್ರೀಶೈಲ ಪೂಜಾರಿ(ಗುರವ), ಶ್ರೀಶೈಲ ಮುಕರಿ, ಮಹಾಂತೇಶ ಸೊಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.