ADVERTISEMENT

ಈರುಳ್ಳಿ ನಾಶ: ಪರಿಹಾರಕ್ಕಾಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:51 IST
Last Updated 22 ಅಕ್ಟೋಬರ್ 2024, 14:51 IST
ಗುಳೇದಗುಡ್ಡ ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ಮಳೆಗೆ ಕೊಳೆತಿರುವ ಈರುಳ್ಳಿ ಬೆಳೆ ತೋರಿಸಿದ ರೈತ ಚಂದ್ರಶೇಖರ ಕಾಳನ್ನವರ
ಗುಳೇದಗುಡ್ಡ ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ಮಳೆಗೆ ಕೊಳೆತಿರುವ ಈರುಳ್ಳಿ ಬೆಳೆ ತೋರಿಸಿದ ರೈತ ಚಂದ್ರಶೇಖರ ಕಾಳನ್ನವರ   

ಗುಳೇದಗುಡ್ಡ: ತಾಲ್ಲೂಕಿನ ಆಸಂಗಿ, ಲಾಯದಗುಂದಿ, ಹಳದೂರ, ಕೋಟೆಕಲ್, ತೆಗ್ಗಿ, ತಿಮ್ಮಸಾಗರ ಗ್ರಾಮಗಳಲ್ಲಿ ಈಚೆಗೆ ಸುರಿದ ಮಳೆಯಿಂದ ಈರುಳ್ಳಿ ಬೆಳೆ ನಾಶವಾಗಿ, ಹೊಲದಲ್ಲಿ ಕೊಳೆತು ಹೋಗಿದೆ. ರೈತರು ಚಿಂತೆಗೀಡಾಗಿದ್ದು, ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಇದೆ. ಆದರೆ ರೈತ ಮಳೆಯಿಂದಾಗಿ ಈರುಳ್ಳಿ ಹಳದಿ ಬಣ್ಣಕ್ಕೆ ತಿರುಗಿದೆ. ಈರುಳ್ಳಿ ಗಡ್ಡೆ ದೊಡ್ಡದಾಗಿದ್ದು ಅದು ಅಲ್ಲಿಯೇ ಕೊಳೆತಿದೆ. ಅದನ್ನು ಮಾರುಕಟ್ಟೆಗೆ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ. ತಾಲ್ಲೂಕಿನಲ್ಲಿ ರೈತರು ಹೆಚ್ಚಾಗಿ ಈ ವರ್ಷ ಈರುಳ್ಳಿ ಬಿತ್ತಿದ್ದರು.

‘ಗುಳೇದಗುಡ್ಡ ತಾಲ್ಲೂಕಿನಲ್ಲಿ ಬೆಳೆದ ಬೆಳೆ ಬಹುತೇಕ ಮಳೆಯಿಂದ ಹಾಳಾಗಿದ್ದು, ಅಧಿಕಾರಿಗಳು ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು’ ಎಂದು ತೆಗ್ಗಿ ಗ್ರಾಮದ ರೈತ ಚಂದ್ರಶೇಖರ ಕಾಳನ್ನವರ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.