ಬಾದಾಮಿ: ‘ಇಲ್ಲಿನ ಬೆಟ್ಟದ ಪರಿಸರದ ಮೇಣಬಸದಿ ಪಕ್ಕದ ಗುಡ್ಡದ ರಂಗನಾಥ ಬೆಟ್ಟ ಮತ್ತು ರೈಲ್ವೆ ಸ್ಟೇಶನ್ ರಸ್ತೆಯ ಕೋಣಮ್ಮ ದೇವಾಲಯದ ಬೆಟ್ಟದ ಸಮೀಪದ ಸಿಡಿಲು ಪಡಿಯಲ್ಲಿ ಹಳೇ ಶಿಲಾಯುಗದ ಶಿಲಾಯುಧಗಳು ಹೊಸದಾಗಿ ಪತ್ತೆಯಾಗಿವೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಾಗಪುರ ಪ್ರಾಗೈತಿಹಾಸ ಶಾಖೆಯ ಅಧೀಕ್ಷಕ ರಮೇಶ ಮೇಲಿನಮನಿ ತಿಳಿಸಿದರು.
‘ಶಾಖೆಯಿಂದ ಪಂ. ದೀನದಯಾಳ್ ಉಪಾಧ್ಯಾಯ ಪುರಾತತ್ವ ಸಂಸ್ಥೆಯ 30ಕ್ಕೂ ಅಧಿಕ ಪಿಜಿ, ಡಿಜಿ ವಿದ್ಯಾರ್ಥಿಗಳು ಮಂಗಳವಾರ ಶೋಧನೆ ನಡೆಸಿದ್ದಾರೆ’ ಎಂದು ಅವರು ಹೇಳಿದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರ್ಜುನರಾವ್, ಕಾಲಿಕತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅವಿಕ್ ಬಿಸ್ವಾಸ್, ಮದ್ರಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿನು ಕೋಶಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.