ADVERTISEMENT

‘ಪುಟ್ಟರಾಜರು ಅಂಧರ ಬಾಳಿಗೆ ಬೆಳಕು’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:14 IST
Last Updated 21 ಅಕ್ಟೋಬರ್ 2024, 14:14 IST
ಗುಳೇದಗುಡ್ಡ ತಾಲ್ಲೂಕಿನ ಹಂಸನೂರ ಗ್ರಾಮದಲ್ಲಿ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ತುಲಾಭಾರ ಕಾರ್ಯಕ್ರಮ ನಡೆಯಿತು
ಗುಳೇದಗುಡ್ಡ ತಾಲ್ಲೂಕಿನ ಹಂಸನೂರ ಗ್ರಾಮದಲ್ಲಿ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ತುಲಾಭಾರ ಕಾರ್ಯಕ್ರಮ ನಡೆಯಿತು   

ಗುಳೇದಗುಡ್ಡ: ಪುಟ್ಟರಾಜ ಗವಾಯಿಗಳ ಸ್ಮರಣೆಯಿಂದ ನಮ್ಮ ಬದುಕು ಪಾವನವಾಗುತ್ತದೆ. ಗವಾಯಿಗಳ ಆಶ್ರಮದಲ್ಲಿ ನೆಲಸಿ, ಸಂಗೀತ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡ ಲಕ್ಷಾಂತರ ಅಂಧ, ಅನಾಥ ಕಲಾವಿದರು ಜಾಗತಿಕವಾಗಿ ಹೆಸರು ಮಾಡಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಅವರು ಭಾನುವಾರ ತಾಲ್ಲೂಕಿನ ಹಂಸನೂರ ಗ್ರಾಮದಲ್ಲಿ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡ 14ನೇ ವರ್ಷದ ಸ್ಮರಣಾಂಜಲಿ ಪೂಜ್ಯರ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸಿ ಮಾತನಾಡಿ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರು ಅಂಧ, ಅನಾಥರ ಬಾಳಿಗೆ ಬೆಳಕಾಗಿ ನಿಂತವರು. ರಾಜ್ಯದ ಸಾಕಷ್ಟು ಅಂಧ, ಅನಾಥ ಕಲಾವಿದರಿಗೆ ಆಶ್ರಯ ನೀಡಿ ಅವರ ಬಾಳಿಗೆ ಬೆಳಕಾಗಿ ನಿಂತು ಅವರ ಪೋಷಣೆ ಮಾಡಿದ್ದಾರೆ ಎಂದರು.

ADVERTISEMENT

ಹಂಸನೂರ ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಶ್ರೀಗಳು, ಹಲಕುರ್ಕಿ ದಿಗಂಬರೇಶ್ವರ ಮಠದ ಷಡಕ್ಷರಯ್ಯ ಸ್ವಾಮೀಜಿ, ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಕನ್ನೂರಮಠದ ವೀರರಾಜೇಂದ್ರ ಸ್ವಾಮೀಜಿ, ತೆಗ್ಗಿ ಶ್ರದ್ಧಾನಂದ ಮಠದ ವಿದ್ಯಾನಂದ ಸ್ವಾಮೀಜಿ, ಹೇಮರಾಜ ಶಾಸ್ತ್ರಿಗಳು ಮಾತನಾಡಿದರು.

ಇದೇ ಸಂದರ್ಭದಲ್ಲಿ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ತುಲಾಭಾರ ಕಾರ್ಯಕ್ರಮ ಹಂಸನೂರು ಹಾಗೂ ಸುತ್ತಲಿನ ಗ್ರಾಮಸ್ಥರು ಬಹಳಷ್ಟು ಅರ್ಥಪೂರ್ಣವಾಗಿ ನೆರವೇರಿಸಿದರು. ಇದಕ್ಕೂ ಮೊದಲು ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮೈಲಾರಲಿಂಗೇಶ್ವರ ಸಂಘದ ಅಧ್ಯಕ್ಷ ಮಹೇಶ ಹೊಸಗೌಡರ, ಹಂಸನೂರ ಗ್ರಾ.ಪಂ ಅಧ್ಯಕ್ಷೆ ಆಶಾ ಚಿಂತಾಕಲ್ಲ, ಪ್ರಭು ಕುಂಬಾರ, ಮಂಜುನಾಥ ಅರಳಿಟ್ಟಿ, ಎಂ.ಎಸ್.ಗುಡಿಸಾಗರ, ಉಮೇಶ ಮುಗ್ಗಜೋಳ, ಅಶೋಕ ಮರಾಠೆ, ಬಸವರಾಜ ಕುಂಬಾರ, ಭೀಮಸಿ ಚಿಮ್ಮಲ, ಶ್ರೀನಿವಾಸ ಚಿಂತಾಕಲ್ಲ, ಶೇಖರ ಚಿಂತಾಕಲ್ಲ, ಸುರೇಶ ಚಿಮ್ಮಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.