ಮುಧೋಳ: 62ನೇ ವಸಂತಕ್ಕೆ ಕಾಲಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಮ್ಮ ಜನ್ಮ ದಿನವನ್ನು ಹುಟ್ಟೂರಾದ ಉತ್ತೂರು ಗ್ರಾಮದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಿಕೊಂಡರು.
ತಾವು ಕಲಿತ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿಎಸ್‌ಆರ್ ಅನುದಾನದಡಿ ₹5 ಕೋಟಿ ಬಿಡುಗಡೆ ಹಾಗೂ ಕುಡಿಯುವ ನೀರಿನ ಘಟಕ ಉದ್ಘಾಟನೆ, ಅಂಗವಿಕಲ ವಿದ್ಯಾರ್ಥಿಗಳಿಗೆ ಸಾಧನೆ ಕಲಕರಣೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನನ್ನ ಬದುಕಿಗೆ ಎಲ್ಲವನ್ನೂ ಕೊಟ್ಟ ಈ ಗ್ರಾಮದ ಋಣ ನನ್ನ ಮೇಲಿದೆ. ಸಿಎಸ್ಆರ್ ಫಂಡ್ ಮೂಲಕ ನಾನು ಕಲಿತ ಶಾಲೆಯನ್ನು ಹೈಟಕ್ ಶಾಲೆ ಮಾಡುವೆ ಹಾಗೂ ಆಸ್ಪತ್ರೆ ಅಭಿವೃದ್ಧಿ ಪಡಿಸುವೆ’ ಎಂದರು.
ಕೆಪಿಸಿಸಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಮ್ಮಾಪುರ ಅವರಿಗೆ ಹಾರೈಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಟಿ. ಪಾಟೀಲ ಮಾತನಾಡಿದರು. ಬಬಲಾದಿಮಠದ ಸಿದ್ಧರಾಮಯ್ಯ ಶ್ರೀ ಆಶೀರ್ವಚನ ನೀಡಿದರು. ನೂರಂದಯ್ಯ ಮಠಪತಿ, ಲಕ್ಕಪ್ಪ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ತಿಮ್ಮಾಪುರ ಅವರ ಧರ್ಮಪತ್ನಿ ಶಶಿಕಲಾ ತಿಮ್ಮಾಪುರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.