ADVERTISEMENT

₹ 12 ಕೋಟಿ ವೆಚ್ಚದಲ್ಲಿ ಹೆದ್ದಾರಿ ಸುಧಾರಣೆ: ಸಚಿವ ಆರ್.ಬಿ. ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:08 IST
Last Updated 15 ಅಕ್ಟೋಬರ್ 2024, 14:08 IST
ಮುಧೋಳದಲ್ಲಿ ಬಬಲೇಶ್ವರ ಯರಗಟ್ಟಿ ರಾಜ್ಯ ಹೆದ್ದಾರಿ ಬೈಪಾಸ್‌ ರಸ್ತೆ ಸುಧಾರಣೆ ಕಾಮಗಾರಿಗೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭೂಮಿಪೂಜೆ ನೆರವೇರಿಸಿದರು
ಮುಧೋಳದಲ್ಲಿ ಬಬಲೇಶ್ವರ ಯರಗಟ್ಟಿ ರಾಜ್ಯ ಹೆದ್ದಾರಿ ಬೈಪಾಸ್‌ ರಸ್ತೆ ಸುಧಾರಣೆ ಕಾಮಗಾರಿಗೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭೂಮಿಪೂಜೆ ನೆರವೇರಿಸಿದರು   

ಮುಧೋಳ: ‘₹ 12 ಕೋಟಿ ವೆಚ್ಚದಲ್ಲಿ ಹೆದ್ದಾರಿ ಸುಧಾರಣೆ ಮಾಡಲಾಗುವುದು. ರಸ್ತೆ ನಿರ್ಮಾಣಕ್ಕೆ ರೈತರು ಜಮೀನು ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಅವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆ ಹತ್ತಿರದ ನಿಪ್ಪಾಣಿ ಮುಧೋಳ ಹೆದ್ದಾರಿಯಲ್ಲಿ ಬಬಲೇಶ್ವರ ಯರಗಟ್ಟಿ ರಾಜ್ಯ ಹೆದ್ದಾರಿ ಬೈಪಾಸ್‌ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಈ ರಸ್ತೆ ಮಾಡುವುದು ಅಗತ್ಯವಾಗಿದ್ದು ಕಬ್ಬು ನುರಿಸುವ ಹಂಗಾಮಿನಲ್ಲಿ ಅಪಘಾತಗಳನ್ನು ತಡೆಗಟ್ಟಲು ಇದು ಸಹಾಯಕ’ ಎಂದು ಹೇಳಿದರು.

ADVERTISEMENT

‘ಶೀಘ್ರದಲ್ಲೇ ದಿನದ 24 ಗಂಟೆ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಗುವುದು. ತಾಯಿ–ಮಗು ಆಸ್ಪತ್ರೆಗೆ ಶೀಘ್ರದಲ್ಲೇ ಅಡಿಪಾಯ ಹಾಕಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.