ADVERTISEMENT

ಸಹಜಾನಂದ ಶ್ರೀಗಳು ನಡೆದಾಡುವ ವಿಶ್ವವಿದ್ಯಾಲಯ

ಸಿದ್ಧಾರೂಢರ 191ನೇ ವಾರದ ಸತ್ಸಂಗ: ಗವಿಸಿದ್ದೇಶ್ವರ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:44 IST
Last Updated 8 ಅಕ್ಟೋಬರ್ 2024, 14:44 IST
ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ 191ನೇ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾಗವಹಿಸಿದ್ದರು
ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ 191ನೇ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾಗವಹಿಸಿದ್ದರು    

ಮಹಾಲಿಂಗಪುರ: ‘ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಶ್ರೀಗಳು ಅಧ್ಯಾತ್ಮ ಕ್ಷೇತ್ರದ ನಡೆದಾಡುವ ವಿಶ್ವವಿದ್ಯಾಲಯವಿದ್ದಂತೆ. ಅವರ ಸನ್ನಿಧಿಯಲ್ಲಿ ಅಧ್ಯಾತ್ಮ ಸಾಧನೆ ಮಾಡಿದವರೇ ಧನ್ಯರು’ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಸಿದ್ಧಾರೂಢರ 191ನೇ ವಾರದ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಹಜಾನಂದ ಶ್ರೀಗಳು ಕಲಿತದ್ದು 4ನೇ ತರಗತಿಯಾದರೂ ಸಹ, ನಾಡಿನ ಶ್ರೇಷ್ಟ ಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಹಿಂದಿಯಿಂದ ಕನ್ನಡಕ್ಕೆ ಅನುವಾದ, ಭಾಮಿನಿ ಷಟ್ಪದಿಯಲ್ಲಿ ಸೇರಿದಂತೆ 25ಕ್ಕೂ ಅಧಿಕ ಅಮೂಲ್ಯವಾದ ಅಧ್ಯಾತ್ಮ ಗ್ರಂಥಗಳನ್ನು ರಚಿಸಿ, ನಾಡಿನ ಅಧ್ಯಾತ್ಮ ಪ್ರಿಯರಿಗೆ ಮಹದುಪಕಾರ ಮಾಡಿದ್ದಾರೆ. 83ರ ಇಳಿ ವಯಸ್ಸಿನಲ್ಲಿಯೂ ಬರವಣಿಗೆ, ಭಗವತ್ ಚಿಂತನ ಸಾಧನ ಶಿಬಿರ, ಪ್ರವಚನಗಳ ಮೂಲಕ ಕಳೆದ 45 ವರ್ಷಗಳಿಂದ ಅಧ್ಯಾತ್ಮ ಸಾಧನೆಯಲ್ಲಿ ಇರುವುದು ಶ್ಲಾಘನೀಯ ಎಂದರು.

ADVERTISEMENT

ಪೀಠಾಧಿಪತಿ ಸಹಜಾನಂದ ಸ್ವಾಮೀಜಿ, ಖಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರೀಜಿ, ಹೊಸೂರ ಪರಮಾನಂದ ಸ್ವಾಮೀಜಿ, ಮಲ್ಲೇಶಪ್ಪ ಕಟಗಿ ಶರಣರು, ಸಿದ್ಧಾನಂದ ಭಾರತಿ ಸ್ವಾಮೀಜಿ ಸಿದ್ಧಾರೂಢರ ಚರಿತ್ರೆಯನ್ನಾಧರಿಸಿ ಮಾತನಾಡಿದರು. ಕುಮಾರ ಚಿದಾನಂದ ಚಿಲಮಿ ಅವರು ದಾಸೋಹ ಏರ್ಪಡಿಸಿದ್ದರು.

ಸಿದ್ಧಾರೂಢ ಟ್ರಸ್ಟ್ ಕಮೀಟಿ ಸದಸ್ಯರಾದ ಡಾ.ಬಿ.ಡಿ.ಸೋರಗಾಂವಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಚಂದ್ರಶೇಖರ ಮೋರೆ, ಚೇತನ ಹಾದಿಮನಿ, ಸದ್ಭಕ್ತರಾದ ಎಸ್.ಕೆ.ಗಿಂಡೆ, ಚನ್ನಪ್ಪ ಪಟ್ಟಣಶೆಟ್ಟಿ, ಯಲ್ಲನಗೌಡ ಪಾಟೀಲ, ಮಹೇಶ ಇಟಕನ್ನವರ, ಮಹಾಲಿಂಗ ಕರೆಹೊನ್ನ, ಸಿದ್ದರಾಮಯ್ಯ ಗೋಠೆ, ಚನಬಸು ಹುರಕಡ್ಲಿ, ಶೇಖರ ಮರೆಗುದ್ದಿ, ಎಂ.ಗುಡ್ಡಪ್ಪ, ಸಿದ್ದು ದಢೂತಿ, ಮಲ್ಲಪ್ಪ ಯಾದವಾಡ, ಚನ್ನಪ್ಪ ಚಂಡೋಲ, ಚನ್ನಪ್ಪ ಗುಗಾಡ, ಶಿವಾನಂದ ತೇಲಿ, ಕುಮಾರ ಉಳ್ಳಾಗಡ್ಡಿ, ಹಣಮಂತ ಮೀರಾಪಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.