ಗುಳೇದಗುಡ್ಡ: ಮಹದಾಯಿ ಹರಿಕಾರ ಬಾದಾಮಿಯ ದಿ. ಬಿ.ಎಂ. ಹೊರಕೇರಿ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ ರಾಜ್ಯಮಟ್ಟದ ‘ಸಾಹಿತ್ಯ ಸಿರಿ’ ಪ್ರಶಸ್ತಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಶಕ್ತ ಭಾಷಾನೀತಿ ತಜ್ಞರ ಸಮಿತಿಯ ಸದಸ್ಯ ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿನ ಪ್ರೊ. ಸಣ್ಣವೀರಣ್ಣ ದೊಡ್ಡಮನಿ ಆಯ್ಕೆಯಾಗಿದ್ದಾರೆ.
ನ.24 ರಂದು ಬಾದಾಮಿಯಲ್ಲಿ ಜರುಗುವ ಬಿ.ಎಂ.ಹೊರಕೇರಿ ಅವರ ಪುತ್ಥಳಿ ಅನಾವರಣ ಮತ್ತು ‘ಹೊನ್ನ ಬಿತ್ತ್ಯಾರ’ ಸಂಸ್ಮರಣೆ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.