ಬಾಗಲಕೋಟೆ: ‘ಮಾಲ್ಗಳಲ್ಲಿ ಮದ್ಯ ಮಾರಾಟ ವಿಷಯ ಚರ್ಚೆಯ ಹಂತದಲ್ಲಿದೆ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಮಾಲ್ಗಳಲ್ಲಿ ಮದ್ಯ ಮಾರಾಟ ಕುರಿತು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಸಲಹೆ ಕೇಳಿ ಬಂದಿತ್ತು. ಮಾರಾಟ ಮಾಡಬೇಕೇ ಅಥವಾ ಬೇಡವೇ ಎಂಬ ವಿಷಯ ಚರ್ಚೆ ಹಂತದಲ್ಲಿ ಇದೆ. ಅದರ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ಆಗಬೇಕು. ಸದ್ಯಕ್ಕೆ ಜಾರಿಗೆ ತರುವ ಯೋಚನೆ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.