ಬೀಳಗಿ: ಪಟ್ಟಣದ ಸಿದ್ಧೇಶ್ವರ ದೇವಸ್ಥಾನಕ್ಕೆ ಶ್ರಾವಣ ಮಾಸದ ಮೊದಲ ಸೋಮವಾರ ದೇವರ ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಜನಸಾಗರವೇ ಹರಿದು ಬಂದಿತ್ತು.
ದೇವಸ್ಥಾನದಲ್ಲಿ ಸಿದ್ಧೇಶ್ವರ ಮೂರ್ತಿಗೆ ಬೆಳಿಗ್ಗೆ ಮಹಾ ಪಂಚಾಮೃತ ಅಭಿಷೇಕ ,ಕ್ಷೀರಾಭಿಷೇಕ, ತುಳಸಿ ಅರ್ಚನೆ, ಪುಷ್ಪಾಲಂಕಾರ, ವಿಶೇಷ ನೈವೇದ್ಯ, ಮಹಾ ಮಂಗಳಾರತಿ , ಕುಂಕುಮಾರ್ಚನೆ ಹಾಗೂ ವಿಶೇಷ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ, ಭಕ್ತಿಯಿಂದ ನಡೆದವು.
ಪ್ರತಿದಿನ ದೇಗುಲದ ಒಳಾಂಗಣದಲ್ಲಿ ಬೀಳಗಿಯ ಮಾಜಿ ಸೈನಿಕರ ನೇತೃತ್ವದಲ್ಲಿ ಜೈ ಜವಾನ್ ಜೈ ಕಿಸಾನ್ ಸಂಘದಿಂದ ಪ್ರಸಾದ ಸೇವೆ ನಡೆಯುತ್ತಿದೆ. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಬೆಳಗಿನ ಜಾವ 4 ಗಂಟೆಯಿಂದ ಪಾದಯಾತ್ರೆಯ ಮೂಲಕ ದೇಗಲಕ್ಕೆ ಬಂದು ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.