ರಬಕವಿ ಬನಹಟ್ಟಿ: ಸಂಯಮದ ಜೀವನ, ಸಹನಶೀಲ ಮತ್ತು ಧರ್ಮ ಪರಿಪಾಲನೆಯ ಸಾಕಾರಮೂರ್ತಿ ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಭಾನುವಾರ ರಬಕವಿಯ ಹೊಸ ಬಸ್ ನಿಲ್ಧಾಣದ ಮುಂಭಾಗದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ನಮಗೆ ಶತಮಾನಗಳು ಬೇಕಾದವು. ಶ್ರೀರಾಮ ಈ ನೆಲದ ಆದರ್ಶ. ಹಿಂದೂಗಳ ಆರಾಧ್ಯ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕಾಶಿ ಕಾರಿಡಾರ್, ಶ‍್ರೀರಾಮ ಜನ್ಮಭೂಮಿ ಪುನರುತ್ಥಾನ ಪ್ರಕ್ರಿಯೆಗಳು ನಡೆದಿವೆ. ಈಗ ಸಮಸ್ತ ಭಾರತೀಯರ ಕನಸು ನನಸಾಗಿದೆ ಎಂದರು.
ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಮಾರತಿ ಗಾಡಿವಡ್ಡರ, ಪ್ರಭು ಪೂಜಾರಿ, ಯಲ್ಲಪ್ಪ ಕಟಗಿ, ರವಿ ದೇಸಾಯಿ, ಶ‍್ರೀಶೈಲ ದಲಾಲ, ಸವಿತಾ ಹೊಸೂರ, ಸುನೀತಾ ತೆಗ್ಗಿ, ನಂದಾ ಕೊಕಟನೂರ, ಸುಮಿತ್ರಾ ಸಜ್ಜನವರ, ಭಾರತಿ ಭಿಲವಡಿ, ಮಂಜುಳಾ ಬೀಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.