ADVERTISEMENT

ಮಗುವಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 17 ಮೇ 2024, 0:09 IST
Last Updated 17 ಮೇ 2024, 0:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬಾಗಲಕೋಟೆ: ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ಜಿಲ್ಲೆಯ ಆರು ತಿಂಗಳ ಬಾಲಕಿಯೊಬ್ಬಳಿಗೆ ಯಶಸ್ವಿಯಾಗಿ ಲಿವರ್‌ ಕಸಿ (ಟ್ರಾನ್ಸ್‌ಪ್ಲಾಂಟೇಷನ್‌) ಮಾಡಲಾಗಿದೆ ಎಂದು ಲಿವರ್‌ ಕಸಿ ಶಸ್ತ್ರಚಿಕಿತ್ಸಕ ಡಾ.ರಾಘವೇಂದ್ರ ಸಿ.ವಿ. ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ಸಾವಿರಕ್ಕೆ ಒಬ್ಬರಲ್ಲಿ ಕಾಣಿಸಿಕೊಳ್ಳುವ ಲಿವರ್ ಬೆಳವಣಿಗೆಯಾಗದಿರುವ ಸಮಸ್ಯೆಗೆ ಕಸಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸರಿಪಡಿಸಲಾಗಿದ್ದು, ಮಗು ಆರೋಗ್ಯವಾಗಿದೆ ಎಂದರು.

ADVERTISEMENT

ಬಹಳಷ್ಟು ಮಕ್ಕಳಲ್ಲಿ ಹುಟ್ಟಿನಿಂದಲೇ ಲಿವರ್ ಬೆಳವಣಿಗೆಯಾಗದಿರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಗೊತ್ತಾದ ಕೆಲವೇ ದಿನಗಳಲ್ಲಿ ಶಸ್ತ್ರಚಿಕಿತ್ಸೆ ಮಾಡದಿದ್ದರೆ, ಮಕ್ಕಳ ಜೀವಕ್ಕೆ ಹಾನಿಯಾಗುತ್ತದೆ. ಸೂಕ್ತ ಸಮಯದಲ್ಲಿ ಪಾಲಕರು ಮಗುವನ್ನು ಕರೆದುಕೊಂಡು ಬಂದಿದ್ದರಿಂದ ಯಶಸ್ವಿಯಾಗಿ ಕಸಿ ಮಾಡಲಾಯಿತು ಎಂದು ತಿಳಿಸಿದರು.

ಕಸಿ ಶಸ್ತ್ರಚಿಕಿತ್ಸೆಗೆ ₹20 ರಿಂದ 25 ಲಕ್ಷ ತಗುಲುತ್ತದೆ. ಬಿಪಿಎಲ್‌ ಕಾರ್ಡ್ ಹೊಂದಿದ್ದರು. ಅದರಿಂದ ಸರ್ಕಾರದ ವಿಮೆ ಹಾಗೂ ಫಂಡ್ ಕ್ರೌಡಿಂಗ್‌ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಅವರ ತಂದೆಯ ಲಿವರ್‌ನ ಶೇ25 ರಷ್ಟು ಭಾಗವನ್ನು ತೆಗೆದು ಮಗುವಿಗೆ ಕಸಿ ಮಾಡಲಾಗಿದೆ ಎಂದು ಹೇಳಿದರು.

ಮಗುವಿನ ತಂದೆ ಮಹಾಂತೇಶ ಮಾತನಾಡಿ, ಇಳಕಲ್‌ನಲ್ಲಿ ವೈದ್ಯರಿಗೆ ತೋರಿಸಿದ್ದೆವು. ಅವರು ನಾರಾಯಣ ಆಸ್ಪತ್ರೆಯ ಡಾ.ರಾಘವೇಂದ್ರ ಅವರ ಬಳಿಗೆ ಕಳುಹಿಸಿದ್ದರು. ಅವರು ಎಲ್ಲ ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಮಗು ಆರೋಗ್ಯವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.