ಕುಳಗೇರಿ ಕ್ರಾಸ್: ಸಮೀಪದ ತಳಕವಾಡ ಗ್ರಾಮದ ಈಶ್ವರಪ್ಪ ಕಾಳಪ್ಪ ಬಡಿಗೇರ ಅವರ ಕಬ್ಬಿನ ಗದ್ದೆಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ತಗುಲಿ ಮೂರು ಎಕರೆ ಕಬ್ಬಿನ ಬೆಳೆಯು ಬೆಂಕಿಗೆ ಆಹುತಿಯಾಗಿದೆ.
ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿಶಾಮಕ ಸಿಬ್ಬಂದಿ ಬಂದು ಕಾರ್ಯಾಚರಣೆ ಕೈಗೊಳ್ಳುವ ವರೆಗೆ ಮೂರು ಎಕರೆ ಕಬ್ಬಿನ ಗದ್ದೆ ಬೆಂಕಿಗೆ ಆಹುತಿಯಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಗದ್ದೆಯ ಬದುವಿಗೆ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಹೊಲದ ಮಧ್ಯ ಭಾಗದಲ್ಲೇ ವಿದ್ಯುತ್ ತಂತಿಗಳು ಹಾಯ್ದು ಹೋಗಿ, ಕೆಲವೆಡೆ ಜೋತು ಬಿದ್ದಿರುವುದರಿಂದ, ಎತ್ತರಕ್ಕೆ ಬೆಳೆದ ಕಬ್ಬಿಗೆ ಬೆಂಕಿ ತಗುಲಿದೆ. ಅಂದಾಜು ₹ 3 ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ರೈತ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.