ಮಹಾಕೂಟ (ಬಾದಾಮಿ): ಬಿಸಿಲಿನ ಬೇಗೆಯನ್ನು ತಾಳದೇ ಮಹಾಕೂಟೇಶ್ವರ ಪುಷ್ಕರಣಿಯಲ್ಲಿ ಭಕ್ತರು ಅದರಲ್ಲಿಯೂ ಯುವಕರು ಹೆಚ್ಚು ಹೊತ್ತುಕಾಲ ಪುಣ್ಯಸ್ನಾನ ಮಾಡಿದರು.
ಯುಗಾದಿ ಅಮಾವಾಸ್ಯೆಯ ನಿಮಿತ್ತ ಭಕ್ತರು ಕಾಶಿ ಪುಷ್ಕರಣಿ ಮತ್ತು ವಿಷ್ಣು ಪುಷ್ಕರಣಿಯಲ್ಲಿ ಸ್ನಾನ ಮಾಡಿದರು. ಯುವಕರು ಮತ್ತು ಮಕ್ಕಳು ನೀರಿನಲ್ಲಿ ಈಜುತ್ತ ಆಟವಾಡಿ ಬಿಸಿಲಿನ ತಾಪದಿಂದ ತಂಪಾದರು.
ಬಾದಾಮಿಗೆ ಬಂದ ಪ್ರಥಮ ಮಳೆ: ಬೇಸಿಗೆ ಬಿಸಿಲಿನಿಂದ ತತ್ತರಿಸುವ ಜನತೆಗೆ ಗುರುವಾರ ರಾತ್ರಿ ಗಾಳಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಅರ್ಧ ಗಂಟೆಕಾಲ ಧಾರಾಕಾರ ಮಳೆ ಸುರಿಯಿತು.
ಮಳೆಯ ಆರಂಭದ ನಂತರ ಐದು ನಿಮಿಷಗಳ ಕಾಲ ಆಲಿಕಲ್ಲು ಮಳೆಯಾಯಿತು. ಮಕ್ಕಳು ಆಲಿಕಲ್ಲನ್ನು ಆಯ್ದುಕೊಂಡು ಸವಿದರು.
ನಂದಿಕೇಶ್ವರ ಗ್ರಾಮದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಆಲಿಕಲ್ಲು ಮಳೆ ಸುರಿಯಿತು. ಆಲಿಕಲ್ಲು ಒಂದು ಇಂಚು ದಪ್ಪ ಇದ್ದವು ಎಂದು ಗ್ರಾಮದ ಶಿವಕುಮಾರ ಹೇಳಿದರು.
ಬಾಚಿನಗುಡ್ಡ, ನೆಲಗಿ, ಚೊಳಚಗುಡ್ಡ, ಕಬ್ಬಲಗೇರಿ, ಯರಗೊಪ್ಪ ಗ್ರಾಮಗಳ ಸುತ್ತಲಿನ ಪ್ರದೇಶದಲ್ಲಿ ಮೊದಲ ಮಳೆಯು ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.