ADVERTISEMENT

ಗುಳೇದಗುಡ್ಡ | ಏರಿದ ತರಕಾರಿ ಬೆಲೆ: ಗ್ರಾಹಕ ಹೈರಾಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:33 IST
Last Updated 17 ಅಕ್ಟೋಬರ್ 2024, 15:33 IST
ಗುಳೇದಗುಡ್ಡ ಪಟ್ಟಣದ ಭಾರತ್ ಮಾರುಕಟ್ಟೆಯಲ್ಲಿ ಗುರುವಾರ ನಡೆದ ತರಕಾರಿ ವಹಿವಾಟು
ಗುಳೇದಗುಡ್ಡ ಪಟ್ಟಣದ ಭಾರತ್ ಮಾರುಕಟ್ಟೆಯಲ್ಲಿ ಗುರುವಾರ ನಡೆದ ತರಕಾರಿ ವಹಿವಾಟು    

ಗುಳೇದಗುಡ್ಡ: ಪಟ್ಟಣದ ಭಾರತ್ ಮಾರ್ಕೆಟ್‍ನಲ್ಲಿ ಗುರುವಾರ ಸಂತೆ ದಿನವಾದ್ದರಿಂದ ಜನರು ತರಕಾರಿ ಖರೀದಿಸಲು ಬಂದಾಗ ಬೆಲೆ ಏರಿಕೆ ಬಿಸಿ ಅನುಭವಿಸಿದರು.

ಟೊಮೆಟೊ, ಬದನೆಕಾಯಿ, ದೊಡ್ಡ ಮೆಣಸು, ಕ್ಯಾರೆಟ್ ಮುಂತಾದ ತರಕಾರಿಗಳ ಬೆಲೆ 1 ಕೆಜಿಗೆ ₹ 100 ದಾಟಿದ್ದು ಗ್ರಾಹಕರು ಬೆಲೆ ಏರಿಕೆಯಿಂದ ದಂಗಾದರು. ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದ ತರಕಾರಿ ಬೆಳೆಗಳು ಹಾಳಾಗಿದ್ದು ಇಳುವರಿ ಇಲ್ಲದ್ದರಿಂದ ಮಾರುಕಟ್ಟೆಗೆ ಕಡಿಮೆ ತರಕಾರಿ ಬಂದಿದ್ದರಿಂದ ಬೆಲೆ ಏರಿಕೆ ಆಗಿದೆ ಎಂದು ತರಕಾರಿ ಮಾರಾಟಗಾರ ಹುಸೇನಸಾಬ ಮುಧೋಳ ಹೇಳಿದರು.  

ಆದರೇ ನಮ್ಮಿಂದ ತರಕಾರಿ ಖರೀದಿಸುವಾಗ ಕಡಿಮೆ ಬೆಲೆಯ ಮೂಲಕ ಸವಾಲಿನಲ್ಲಿ ಮಾರಾಟಗಾರರು ತೆಗೆದುಕೊಂಡು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಕೊಟ್ನಳ್ಳಿ ಗ್ರಾಮದ ರೈತ ಶಿವಪ್ಪ ಹಾದಿಮನಿ ಹೇಳಿದರು.

ADVERTISEMENT

ಬಡ ಮತ್ತು ಸಾಮಾನ್ಯ ವರ್ಗದ ಜನರು ಬೆಲೆ ಏರಿಕೆಯಿಂದ ತರಕಾರಿ ಖರೀದಿಸುವುದು ದುಸ್ತರವಾಗಿದೆ ಎಂದು ಸುಮಡ್ಡಿ ಗ್ರಾಮದ ಸರಿತಾ ಚಂದನ್ನವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.