ADVERTISEMENT

ವಿಜಯಾನಂದ ಕಾಶಪ್ಪನವರ ಭರವಸೆಯ ನಾಯಕ

ಎಸ್.ಆರ್. ಕಾಶಪ್ಪನವರ 22ನೇ ಪುಣ್ಯಸ್ಮರಣೆ: ಉಜ್ಜಯನಿ ಪೀಠದ ಸಿದ್ಧಲಿಂಗ ರಾಜಕೇಂದ್ರ ಶಿವಚಾರ್ಯರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:55 IST
Last Updated 3 ಜುಲೈ 2024, 14:55 IST
ಹುನಗುಂದ ತಾಲ್ಲೂಕಿನ ಹಾವರಗಿ ಗ್ರಾಮದ ಎಸ್.ಎಂ.ಎಸ್. ಪ್ರೌಢಶಾಲೆಯ ಆವರಣದಲ್ಲಿ ನಡೆದ ಎಸ್.ಆರ್.ಕಾಶಪ್ಪನವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉಜ್ಜಯನಿ ಪೀಠದ ಸಿದ್ಧಲಿಂಗ ರಾಜಕೇಂದ್ರ ಶಿವಚಾರ್ಯರು ಉದ್ಘಾಟಿಸಿದರು
ಹುನಗುಂದ ತಾಲ್ಲೂಕಿನ ಹಾವರಗಿ ಗ್ರಾಮದ ಎಸ್.ಎಂ.ಎಸ್. ಪ್ರೌಢಶಾಲೆಯ ಆವರಣದಲ್ಲಿ ನಡೆದ ಎಸ್.ಆರ್.ಕಾಶಪ್ಪನವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉಜ್ಜಯನಿ ಪೀಠದ ಸಿದ್ಧಲಿಂಗ ರಾಜಕೇಂದ್ರ ಶಿವಚಾರ್ಯರು ಉದ್ಘಾಟಿಸಿದರು   

ಹುನಗುಂದ: ‘ತಂದೆ ಕಂಡ ಕನಸನ್ನು ಮಗ ವಿಜಯಾನಂದ ಕಾಶಪ್ಪನವರ ನನಸು ಮಾಡುವ ಮೂಲಕ ರಾಜ್ಯ ಮತ್ತು ಕ್ಷೇತ್ರದ ಭರವಸೆಯ ನಾಯಕ ಆಗಿ ಹೊರಹೊಮ್ಮುತ್ತಿದ್ದಾರೆ’ ಎಂದು ಉಜ್ಜಯನಿ ಪೀಠದ ಸಿದ್ಧಲಿಂಗ ರಾಜಕೇಂದ್ರ ಶಿವಚಾರ್ಯರು ಹೇಳಿದರು.

ತಾಲ್ಲೂಕಿನ ಹಾವರಗಿ ಗ್ರಾಮದ ಎಸ್.ಎಂ.ಎಸ್. ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ನಡೆದ ಎಸ್.ಆರ್. ಕಾಶಪ್ಪನವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ ಇಡೀ ಕ್ಷೇತ್ರವನ್ನು ನೀರಾವರಿಗೆ ಒಳಪಡಿಸುವುದು ಎಸ್.ಆರ್. ಕಾಶಪ್ಪನವರ  ಅವರ ಹೆಬ್ಬಯಕೆ ಆಗಿತ್ತು. ಆ ನಿಟ್ಟಿನಲ್ಲಿ ವಿಜಯಾನಂದ ಕಾಶಪ್ಪನವರ ಶೈಕ್ಷಣಿಕ, ಆರೋಗ್ಯ, ನೀರಾವರಿ ಸೇರಿದಂತೆ ವಿವಿಧ ವಲಯಗಳನ್ನು ಅಭಿವೃದ್ಧಿ ಪಡಿಸಿ ಮತಕ್ಷೇತ್ರದ ಪ್ರಗತಿಗೆ ಕಾರಣರಾಗಿದ್ದಾರೆ’ ಎಂದರು.

ADVERTISEMENT

ಕಾಶಿಪೀಠದ ನೂತನ ಪೀಠಾಧೀಶ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಚಾರ್ಯರು ಮಾತನಾಡಿ, ‘ಎಸ್.ಆರ್. ಕಾಶಪ್ಪನವರ  ದಿಟ್ಟ ನಾಯಕ. ಇಂದಿನ ದಿನಗಳಲ್ಲಿ ಮಂತ್ರಿ, ಶಾಸಕರು ತಮ್ಮ ಕುರ್ಚಿಗಳನ್ನು ಉಳಿಸಿಕೊಳ್ಳಲು ಕಷ್ಟ ಪಡುತ್ತಾರೆ. ಆದರೆ ಎಸ್.ಕಾಶಪ್ಪನವರ ಧರ್ಮವೇ ನನ್ನ ಉಸಿರು ಎಂದು ತಿಳಿದುಕೊಂಡು ಧರ್ಮ ರಕ್ಷಣೆಗಾಗಿ ರಾಜನ ಸ್ಥಾನ ಗಿಟ್ಟಿಸಿಕೊಂಡಿದ್ದರು’ ಎಂದು ಹೇಳಿದರು.

ಗಿರಿಸಾಗರದ ರುದ್ರಮುನಿ ಶಿವಚಾರ್ಯರು, ಬಿಲ್ ಕೆರೂರಿನ ಸಿದ್ಧಲಿಂಗ ಶಿವಚಾರ್ಯರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡ್ಡಮನಿ, ಸಿ.ವಿ. ಕೋಟಿ ಮಾತನಾಡಿದರು.

ಹಡಲಿಯ ರುದ್ರಮುನಿ ಶಿವಚಾರ್ಯರು, ಚಳಗೇರಿಯ ವಿರುಪಾಕ್ಷಲಿಂಗ ಶಿವಚಾರ್ಯರು, ಕೊಲ್ಹಾರದ ಯೋಗಿ ಕಲ್ಲಿನಾಥ ದೇವರು, ರಾಮದುರ್ಗದ ರಾಜೇಂದ್ರ ಮುತ್ಯಾನವರ, ತಂಗಡಗಿಯ ಅನ್ನದಾನಿ ಭಾರತಿ ಸ್ವಾಮೀಜಿ, ದಿಂಡವಾರದ ಕುಮಾರಲಿಂಗ ಶಿವಚಾರ್ಯರು, ಎಸ್.ಆರ್.ಕೆ ಸ್ಮಾರಕ ಪ್ರತಿಷ್ಠಾನ ಗೌರವಾಧ್ಯಕ್ಷೆ ಗೌರಮ್ಮ ಕಾಶಪ್ಪನವರ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ, ದೇವಾನಂದ ಕಾಶಪ್ಪನವರ, ಸಿ.ವಿ. ಕೋಟಿ, ಬಸವರಾಜ ಶಿರೂರು ಇದ್ದರು.

ಹುನಗುಂದ: ತಾಲ್ಲೂಕಿನ ಹಾವರಗಿ ಗ್ರಾಮದ ಎಸ್.ಎಂ.ಎಸ್. ಪ್ರೌಢಶಾಲೆಯ ಆವರಣದಲ್ಲಿ ನಡೆದ ಎಸ್.ಆರ್. ಕಾಶಪ್ಪನವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಎಸ್.ಆರ್. ಕಾಶಪ್ಪನವರ ಭಾವಚಿತ್ರಕ್ಕೆ ಸ್ವಾಮೀಜಗಳು ಸೇರಿದಂತೆ ಗಣ್ಯರು ಪುಷ್ಪಾರ್ಪಣೆ ಮಾಡಿದರು.

ತಂದೆಯ ಆಶಯದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ’

‘ತಂದೆ ಆಶಯದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ’ ಎಂದು ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಎಸ್.ಆರ್.ಕೆ. ಪ್ರತಿಷ್ಠಾನ ವತಿಯಿಂದ ಪ್ರತಿ ವರ್ಷ ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇವೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಇಸ್ರೇಲ್ ಮಾದರಿಯಲ್ಲಿ 60 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆ ಕಲ್ಪಿಸಲಾಗಿದೆ. ಹೊಳೆ ಸಾಲಿನ ಹಳ್ಳಿಗಳಿಗೆ ಕಾಲುವೆ ನೀರಾವರಿ ವ್ಯವಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕ್ಷೇತ್ರದ 100 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್ ಮಾಡಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡುತ್ತೇನೆ’ ಎಂದರು. ಇದೇ ಸಂದರ್ಭದಲ್ಲಿ ಮತಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಆಯೋಜನೆ ಮಾಡುವ ಆಲೋಚನೆ ಇದೆ. ಪಂಚ ಪೀಠಾಧೀಶರು ಧರ್ಮಸಭೆಗೆ ಆಗಮಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.