ADVERTISEMENT

ರಬಕವಿ ಬನಹಟ್ಟಿ: ಸೂಸುತ್ರವಾಗಿ ನಡೆದ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:11 IST
Last Updated 27 ಅಕ್ಟೋಬರ್ 2024, 15:11 IST
ಬನಹಟ್ಟಿಯಲ್ಲಿ ಎಸ್‌ಆರ್‌ಎ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗ್ರಾಮ ಲೆಕ್ಕಾಧಿಕಾರಿಗಳ ಪರೀಕ್ಷೆಗೆ ಆಗಮಿಸಿದ ಅಭ್ಯರ್ಥಿಗಳನ್ನು ತಪಸಣೆ ಮಾಡಿ ಕೇಂದ್ರದೊಳಗೆ ಬಿಡಲಾಯಿತು
ಬನಹಟ್ಟಿಯಲ್ಲಿ ಎಸ್‌ಆರ್‌ಎ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗ್ರಾಮ ಲೆಕ್ಕಾಧಿಕಾರಿಗಳ ಪರೀಕ್ಷೆಗೆ ಆಗಮಿಸಿದ ಅಭ್ಯರ್ಥಿಗಳನ್ನು ತಪಸಣೆ ಮಾಡಿ ಕೇಂದ್ರದೊಳಗೆ ಬಿಡಲಾಯಿತು   

ರಬಕವಿ ಬನಹಟ್ಟಿ: ‘ರಬಕವಿ ಬನಹಟ್ಟಿ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಗ್ರಾಮ ಲೆಕ್ಕಾಧಿಕಾರಿಗಳ ಪರೀಕ್ಷೆ ಸೂಸುತ್ರವಾಗಿ ನಡೆಯಿತು’ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.

ಬನಹಟ್ಟಿಯ ಎಸ್‌ಆರ್‌ಎ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 47 ಮತ್ತು ಮಧ‍್ಯಾಹ್ನ 45 ಅಭ್ಯರ್ಥಿಗಳು ರಬಕವಿಯ ಎಂ.ವಿ. ಪಟ್ಟಣ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 22 ಮತ್ತು ಮಧ್ಯಾಹ್ನ 23 ಜನರು ಹಾಗೂ ಯಲ್ಲಟ್ಟಿಯ ಕೊಣ‍್ಣೂರ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 36 ಮಧ್ಯಾಹ್ನ 37 ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು ಎಂದು ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರಾದ ಬಿ.ಆರ್. ಗೊಡ್ಡಾಳೆ, ರಾಜೇಶ ನೋಟದ ಮತ್ತು ಚಂದ್ರಪ್ರಭಾ ಬಾಗಲಕೋಟ ತಿಳಿಸಿದರು.

ಪರೀಕ್ಷೆಗೆ ತಲಾ 105 ಜನರು ಗೈರು ಹಾಜರಾಗಿದ್ದರು.

ADVERTISEMENT

ಐದು ನಿಮಿಷ ತಡವಾಗಿ ಬಂದ ಅಭ್ಯರ್ಥಿಗೆ ದೊರೆಯದ ಪ್ರವೇಶ: ಇಲ್ಲಿನ ಎಸ್‌ಆರ್‌ಎ ಪದವಿಪೂರ್ವ ಕಾಲೇಜಿನ ಕೇಂದ್ರಕ್ಕೆ ಬಾದಾಮಿಯ ಮಹಿಳಾ ಅಭ್ಯರ್ಥಿಗೆ ಸರಿಯಾಗಿ ಬಸ್ ಸಿಗದ ಕಾರಣ ಪರೀಕ್ಷಾ ಕೇಂದ್ರಕ್ಕೆ ಐದು ನಿಮಿಷ ತಡವಾಗಿ ಬಂದರು. ಅವರಿಗೆ ಪ್ರವೇಶ ನೀಡದೆ ಮರಳಿ ಕಳುಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.